ಬೆಂಗಳೂರು,ಫೆ,10,2020(www.justkannada.in): ಇತ್ತೀಚೆಗಷ್ಟೇ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ಮಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದ 11 ಮಂದಿ ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಖಾತೆ ಹಂಚಿಕೆಯನ್ನೂ ಮಾಡಿದ್ದಾರೆ. ಜಲಸಂಪನ್ಮೂಲ ಖಾತೆಗೆ ಪ್ರಬಲವಾಗಿ ಪಟ್ಟು ಹಿಡಿದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಅದೇ ಖಾತೆಯನ್ನ ನೀಡುವ ಮೂಲಕ ಸಿಎಂ ಬಿಎಸ್ ವೈ ಗಿಫ್ಟ್ ಕೊಟ್ಟಿದ್ದಾರೆ.
ಹಾಗೆಯೇ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಜಾಕ್ ಪಾಟ್ ಹೊಡೆದಿದ್ದು, ಇವರಿಗೆ ಸಿಎಂ ಬಿಎಸ್ ವೈ ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದಾರೆ. ನೂತನ ಸಚಿವರಿಗೆ ಹಂಚಿಕೆ ಮಾಡಲಾದ ಖಾತೆಗಳ ವಿವರ ಹೀಗಿದೆ ನೋಡಿ….
ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಖಾತೆ.
ಬಿ.ಸಿಪಾಟೀಲ್ – ಅರಣ್ಯ ಖಾತೆ.
ಶ್ರೀಮಂತ್ ಪಾಟೀಲ್ – ಜವಳಿಖಾತೆ.
ಎಸ್.ಟಿ ಸೋಮಶೇಖರ್ – ಸಹಕಾರಖಾತೆ
ಶಿವರಾಮ್ ಹೆಬ್ಬಾರ್ – ಕಾರ್ಮಿಕ ಖಾತೆ.
ನಾರಾಯಣಗೌಡ – ಪೌರಾಡಳಿತ ,ತೋಟಗಾರಿಕೆ ಖಾತೆ.
ಡಾ.ಕೆ.ಸುಧಾಕರ್ – ವೈದ್ಯಕೀಯ ಶಿಕ್ಷಣ ಖಾತೆ
ಗೋಪಾಲಯ್ಯ – ಸಣ್ಣಕೈಗಾರಿಕೆ ಖಾತೆ.
ಭೈರತಿ ಬಸವರಾಜ್ – ನಗರಾಭಿವೃದ್ದಿ ಖಾತೆ,
ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ.
Key words: CM BS Yeddyurappa-ministrial- allocation – new minister.