ಕಲಬುರಗಿ,ನವೆಂಬರ್,24,2020(www.justkannada.in) ಮರಾಠ ಅಭಿವೃದ್ಧಿ ನಿಗಮ ಮತ್ತು ವಿರಶೈವ ಲಿಂಗಾಯಿತ ಅಭಿವೃದ್ದಿ ನಿಗಮ ರಚಿಸಿ ಅನುದಾನ ಬಿಡುಗಡೆ ಮಾಡಿರುವ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಬಿಎಸ್ ವೈ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಕೊಂಡಿರಲಿಲ್ಲ. ಸಮಾಜವನ್ನ ಭಾಗ ಮಾಡುತ್ತಿದ್ದಾರೆ. ಜಾತಿ ಭಾಷೆ ಮೇಲೆ ರಾಜಕೀಯ ಮಾಡೋದು ಸರಿಯಲ್ಲ. ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಕಲ್ಬರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾಳೆ ಸಿಬಿಐ ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಮಗಳ ಎಂಗೆಜ್ಮೆಂಟ್ ಇದ್ದಾಗ ಮನೆಗೆ ಬಂದು ನೋಟಿಸ್ ಕೊಡ್ತಾರೆ, ಬಿಜೆಪಿಗೆ ದ್ವೇಷದ ರಾಜಕಾರಣ ಉಕ್ಕಿ ಹರಿಯುತ್ತಿದೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ. ಕಾನೂನಿನ ಚೌಕಟ್ಟಿನಲ್ಲೇ ಉತ್ತರ ನೀಡುತ್ತೇನೆ ಎಂದರು.
ನಮ್ಮ ಅಭಿಮಾನಿಗಳು ಯಾರು ಸಿಬಿಐ ಆಫೀಸ್ಗೆ ಬರಬಾರದು. ಯಾರು ಕೂಡ ನನ್ನ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು. ಯಾವ ಶಾಸಕರ ಮೇಲು ಸಿಬಿಐ ತನಿಖೆಗೆ ಕೊಟ್ಟಿಲ್ಲ, ನನಗೆ ಮಾತ್ರ ನೋಟೀಸ್ ನೀಡಲಾಗಿದೆ. ನನ್ನ ಮೇಲೆ ಎಫ್ಐಆರ್ ಹಾಕಿದ್ದೆ ರಾಜಕೀಯ ಪ್ರೇರಿತ. ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
english summary….
I didn’t knew CM BSY will think so cheaply – KPCC President D.K. Shivakumar
Kalaburagi, Nov. 24, 2020 (www.justkannada.in): KPCC President D.K. Shivakumar has strongly criticized the decision of forming the Maratha and Veerashaiva-Lingayath Development Coporations.
Speaking to the press persons in Kalaburagi he expressed his ire upon the Chief Minister and alleged that the BJP government is dividing the society by forming corporations in the name caste. “It is not correct to do caste-based politics. I never knew Yedyurappa would become so cheap,” he said.
He also said that he would appear before the CBI for inquiry tomorrow.
Keyword: D.K. Shivakumar-Corporations-B S Yedyurappa
Key words: CM BS yeddyurappa- never got – this level-KPCC President -DK Shivakumar -criticizes …