ಬೆಂಗಳೂರು,ಸೆಪ್ಟಂಬರ್,19,2020(www.justkannada.in): ಸಂಪುಟ ವಿಸ್ತರಣೆ, ರಾಜ್ಯದ ಹಲವು ವಿಚಾರ ಕುರಿತು ಚರ್ಚಿಸಲು ದೆಹಲಿಗೆ ತೆರಳಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದು ಈ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಯಿಂದ ಬರಿಗೈಲಿ ವಾಪಸ್ ಆಗಿದ್ದಾರೆ. ಹೀಗಾಗಿ ಇದನ್ನು ಮುಚ್ಚಿಡಲು ಸಂಪುಟ ವಿಸ್ತರಣೆ ಎಂದು ಹೇಳುತ್ತಿದ್ದಾರೆ. ಆದರೆ ಇದಕ್ಕೂ ಕೂಡ ಅವರು ಒಪ್ಪಿಗೆ ನೀಡಿಲ್ಲ ಎಂದು ಲೇವಡಿ ಮಾಡಿದರು.
ಹಾಗೆಯೇ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ದೊಡ್ಡ ಮಟ್ಟದ ಸಾಲ ಮಾಡಿದೆ. ಒಂದು ವರ್ಷದಲ್ಲಿ ಒಂದುವರೆ ಲಕ್ಷ ಕೋಟಿ ಸಾಲ ಮಾಡಿದೆ. ಮತ್ತೆ ಒಂದು ವರ್ಷ ಸಾಲ ಮಾಡಿದರೇ ಅದಕ್ಕೆ ಹೊಣೆ ಯಾರು…? ಸ್ವತಂತ್ರ ಬಂದಾಗಿನಿಂದ ಈವರೆಗೆ ಎಷ್ಟು ಸಾಲ ಮಾಡಲಾಗಿದೆಯೋ ಅಷ್ಟು ಸಾಲ ಮಾಡಿ ಹೋಗುತ್ತಾರೆ ಎಂದು ಕಿಡಿಕಾರಿದರು.
ಹಿಂದುತ್ವ ಎಂಬ ಅಫೀಮು ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ…
ಹಿಂದುತ್ವ ಎಂಬ ಅಫೀಮನ್ನು ದೇಶದ ಯುವಕರಿಗೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಇದೇ ಯುವಕರು ಪ್ರಧಾನಿ ಮೋದಿ ಅವರ ಹುಟ್ಟಹಬ್ಬವನ್ನ ನಿರುದ್ಯೋಗ ದಿನಾಚಾರಣೆಯಾಗಿ ಆಚರಿಸುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಲು ಮೋದಿಯೇ ಕಾರಣ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
Key words: CM BS Yeddyurappa- returned – Delhi – empty hand-Former CM -Siddaramaiah