ಕೊಪ್ಪಳ,ಜನವರಿ,9,2021(www.justkannada.in): ರಾಜ್ಯದ ಅರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ನಿರೀಕ್ಷೆಯಂತೆ ನಾವು ಯಾವ ಕೆಲಸನೂ ಮಾಡಿಲ್ಲ ಎಂದು ಹೇಳುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಸತ್ಯ ಒಪ್ಪಿಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಕೋವಿಡ್ ಕಾರಣ, ಅತಿವೃಷ್ಟಿ, ಬರಗಾಲದಿಂದ ಕೆಲಸ ಮಾಡಲು ಆಗಿಲ್ಲ. ರಾಜ್ಯದ ಅರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಸರಿಯಾಗಿ ಕೆಲಸ ಮಾಡಿಲ್ಲ. 40, 50 ಸಾವಿರ ಬಜೆಟ್ ಗೆ ಕೋತಾ ಎಂದರು. ಇದೆಲ್ಲಾ ಜನತೆಗೆ ಗೊತ್ತಿದೆ. ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಯುವರಾಜ್ ಜತೆ ರಾಜಕಾರಣಿಗಳ ಫೋಟೋ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಫೊಟೋ ತೆಗಿಸಿದ್ರೆ ಅಪರಾಧ ಅಲ್ಲ, ಅದರ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಬಳಿಕ ಸತ್ಯ ಹೊರಬರುತ್ತದೆ ಎಂದರು.
ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡುತ್ತಿದ್ದೇವೆ. ಕೆಲಸ ಆರಂಭ ಆದ ಬಳಿಕ ಪ್ರಧಾನಿ ಮೋದಿ ಕರೆಸಿ ಉದ್ಘಾಟನೆ ಮಾಡಬೇಕೆಂಬ ಆಪೇಕ್ಷೆ ಇದೆ. ಟಾಯ್ಸ್ ಕ್ಲಸ್ಟರ್ ಗೆ ಭೂಮಿ ಪೂಜೆ ಮಾಡಿ ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ, ಸ್ವಾಭಿಮಾನಿ ರೈತ ಕಾರ್ಡ್ ವಿತರಣೆ ಮಾಡಲಾಗುವುದು ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರದಿಂದ ಯಾವಾಗ ಹೇಳ್ತಾರೋ ಅವಾಗ ಸಂಪುಟ ವಿಸ್ತರಣೆ ಎಂದು ಸ್ಪಷ್ಟನೆ ನೀಡಿದರು.
Key words: CM BS Yeddyurappa- says – not done- anything – expected.