ಬೆಂಗಳೂರು,ಅ,18,2019(www.justkannada.in): ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ನೀರು ಹರಿಸುವುದಾಗಿ ನೀಡಿದ್ದ ಹೇಳಿಕೆಯನ್ನ ಖಂಡಿಸಿರುವ ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ಮುಖಂಡ ವಿ .ಆರ್ .ಸುದರ್ಶನ್, ಕೂಡಲೇ ಸಿಎಂ ಬಿಎಸ್ ವೈ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಭಾಪತಿ ವಿ .ಆರ್ .ಸುದರ್ಶನ್, ಮಹಾರಾಷ್ಟ್ರ ಪರ ಮಾತನಾಡಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಯಾಗಿ ಮಾತನಾಡಿಲ್ಲ. ಹೀಗಾಗಿ ಸಿಎಂ ಬಿಎಸ್ ವೈ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ರಾಜ್ಯದ ಮೇಲೆ ಜನತೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸಿಎಂಗೆ ಅರಿವಿಲ್ಲ. ಕರ್ನಾಟಕ ಸಂಕಷ್ಟ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ನೆರವಿಗೆ ಬರಲಿಲ್ಲ. ಬರದ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಸಹಾಯಕ್ಕೆ ಬರಲಿಲ್ಲ. ಅಲ್ಲದೆ ಮಹದಾಯಿ ವಿಚಾರದಲ್ಲೂ ಮಹಾರಾಷ್ಟ್ರ ನಿರ್ಲಕ್ಷ್ಯ ವಹಿಸಿದ್ದು ಕೇವಲ ಹಾರಿಕೆಯ ಉತ್ತರ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮನಮೋಹನ್ ಸಿಂಗ್ ರ ಆರ್ಥಿಕ ಸ್ಥಿತಿ ಯ ಬಗ್ಗೆ ಮಾತನಾಡುತ್ತಾರೆ. ಮನಮೋಹನ್ ಸಿಂಗ್ ರ ಸರ್ಕಾರದ ಆರ್ಥಿಕ ವ್ಯವಸ್ಥೆ ಬಗ್ಗೆ ಯಾರೂ ಮಾತನಾಡಲು ಸಾಧ್ಯವಿಲ್ಲ. ಆದರೆ ತಮ್ಮ ವೈಫಲ್ಯವನ್ನು ಮರೆಮಾಚಲು ನಿರ್ಮಲಾ ಸೀತಾರಾಮನ್ ಮಾತನಾಡುತ್ತಾರೆ. ಇಂದಿನ ಸರ್ಕಾರದಲ್ಲಿ ಕಾರ್ಮಿಕರು, ಕೈಗಾರಿಕೆ, ರೈತರು ಅದೋಗತಿಗೆ ತಲುಪಿದ್ದಾರೆ. ಅದನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಕೇವಲ ಯಮೋಷನಲ್ ವಿಷಯಗಳನ್ನು ಎಷ್ಟು ದಿನ ಜನರ ಮುಂದಿಡಲು ಸಾಧ್ಯ? ಎಂದು ಆರ್.ವಿ ಸುದರ್ಶನ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಕೇವಲ ರಾಜಕೀಯಕ್ಕೆ ಮಹತ್ವ ನೀಡುತ್ತಿದ್ದಾರೆ. ತಮ್ಮ ಪಕ್ಷವನ್ನು ಬಲಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಅವರು ಹಸಿವು ಮುಕ್ತ ಭಾರತ ಮಾಡುವ ಕಾರ್ಯಕ್ರಮ ಗಳನ್ನು ನೀಡುತ್ತಿಲ್ಲ. 102 ಸ್ಥಾನಕ್ಕೆ ಭಾರತ ಹೋಗಿದೆ. ದೇಶದ ಜನರ ಭವಿಷ್ಯ ದ ಬಗ್ಗೆ ಯೋಚಿಸಲಿ, ಅಸಡ್ಡೆ, ನಿರ್ಲಕ್ಷ್ಯ ಮಾಡುವುದನ್ನು ಕೇಂದ್ರ ಬಿಡಬೇಕು ಎಂದು ಸುದರ್ಶನ್ ಸಲಹೆ ನೀಡಿದರು.
ತಮ್ಮದೇ ಸರ್ಕಾರವಿದ್ದರೂ ಯಾವುದೇ ಪ್ರಯೋಜನ ಆಗ್ತಿಲ್ಲ. ದೇಶದ ಜನರೂ ಕೂಡ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷಗಳೂ ಕೂಡ ಕೇಂದ್ರದ ವಿರುದ್ದ ಗಟ್ಟಿಯಾಗಿ ಹೋರಾಟ ಮಾಡಬೇಕಿದೆ. ಭಾರತ ರತ್ನಕ್ಕೆ ಅದರದೇ ಆದ ಮಾನದಂಡವಿದೆ. ಆದನ್ನು ರಾಜಕೀಯಗೊಳಿಸಬಾರದು. ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷರ ಥರ ಕರ್ನಾಟಕದ ಸಿಎಂ ಮಾತನಾಡಿದ್ದಾರೆ ಎಂದು ಸುದರ್ಶನ್ ಟೀಕಿಸಿದರು.
Key words:CM BS yeddyurappa- talk – Maharashtra- apologize- congress leader-VR Sudarshan