ಬೆಂಗಳೂರು,ಸೆಪ್ಟಂಬರ್,23,2020(www.justkannada.in): ಸಿಎಂ ಬ್ಲಾಕ್ ಹಣವನ್ನ ವೈಟ್ ಮಾಡೋಕೆ ಕೊಲ್ಕತ್ತಾಗೆ ಕಳಿಸ್ತಾರೆ. ಇಲ್ಲಿನ ಬ್ಲಾಕ್ ಮನಿ ಅಲ್ಲಿ ವೈಟ್ ಮಾಡಿಕೊಳ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದರು. ಸುದ್ಧಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೇಲ್ಮನೆ ಸಭಾಪತಿ ಎಸ್.ಆರ್.ಪಾಟೀಲ್, ಈಶ್ವರ್ ಖಂಡ್ರೆ, ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್,ಹೆಚ್.ಕೆ.ಪಾಟೀಲ್ ಉಪಸ್ಥಿತರಿದ್ದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಸಿಎಂ ಬ್ಲಾಕ್ ಹಣವನ್ನ ವೈಟ್ ಮಾಡೋಕೆ ಕೊಲ್ಕತ್ತಾಗೆ ಕಳಿಸ್ತಾರೆ. ಇಲ್ಲಿನ ಬ್ಲಾಕ್ ಮನಿ ಅಲ್ಲಿ ವೈಟ್ ಮಾಡಿಕೊಳ್ತಾರೆ. ಕೊಲ್ಕತ್ತಾದ ಏಳು ಖಾಸಗಿ ಸಂಸ್ಥೆಗಳಿಗೆ ಹೂಡಿಕೆ ಮಾಡ್ತಾರೆ. ಬೆಲ್ ಗ್ರೇವಿಯಾ ಯಡಿಯೂರಪ್ಪ ಕುಟುಂಬದ ಕಂಪನಿ. ಬಿಎಸ್ ಎಸ್ ಎಸ್ಟೇಟ್ ಪ್ರೈ,ಲಿ ಕಂಪನಿ ಯಾರದ್ದು. ವಿಜಯೇಂದ್ರ, ಶಶಿಧರ, ಸಂಜಯ್ ಕಂಪನಿ. ಇದು ಕೊಲ್ಕತ್ತಾದಲ್ಲಿರುವ ಕಂಪನಿ. ಇಲ್ಲಿನ ಬ್ಲಾಕ್ ಮನಿ ಅಲ್ಲಿ ವೈಟ್ ಮಾಡಿಕೊಳ್ತಾರೆ. ಇದೆಲ್ಲವೂ ಹವಾಲಾ ಹಣ. ಇದರ ಬಗ್ಗೆ ಕರೆಪ್ಶನ್ ಆ್ಯಕ್ಟ್ ಅಡಿ ತನಿಖೆಯಾಗಬೇಕು. ಮನಿ ಲ್ಯಾಂಡ್ರಿಂಗ್ ಆ್ಯಕ್ಟ್ ಕೂಡ ಉಲ್ಲಂಘನೆಯಾಗಿದೆ ಇಷ್ಟೆಲ್ಲಾ ನಡೆದಿದ್ದರೂ ಇಡಿ ಯಾಕೆ ಗಮನಿಸಿಲ್ಲ. ವಿರೋಧ ಪಕ್ಷಗಳಾದ್ರೆ ಸೂಟ್ ಕೇಸ್ ಹಾಕಿ ಸರ್ಕಾರ ಕಿತ್ತು ಹಾಕ್ತಾರೆ. ಈಗ ಎನ್ಫೋರ್ಸ್ ಮೆಂಟ್ ಇಲಾಖೆ ಏನ್ಮಾಡ್ತಿದೆ. ಇದೆಲ್ಲವೂ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿರುವುದು. ಸಿಎಂ ಕುಟುಂಬದ ಮೇಲೆ ತನಿಖೆಯಾಗಲೇಬೇಕು ಎಂದು ಆಗ್ರಹಿಸಿದರು.
ಇದೆಲ್ಲ ಆದ್ರೂ ಸಿಎಂ ಸ್ಥಾನದಲ್ಲಿ ಹೇಗೆ ಮುಂದುವರಿಯುತ್ತಾರೆ. ದಾಖಲೆಗಳನ್ನೇ ಮುಚ್ಚಿಹಾಕೋ ಪ್ರಯತ್ನ ನಡೆಯುತ್ತೆ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು. ಈ ಭ್ರಷ್ಟಾಚಾರದ ಬಗ್ಗೆ ಮೊದಲು ತನಿಖೆಯಾಗಬೇಕು. ಆರೋಪಿಗಳನ್ನ ಮೊದಲು ಅರೆಸ್ಟ್ ಮಾಡಬೇಕು. ದೇ ಲೈಕ್ ರಾಬರಿ, ದೇ ಲೈಕ್ ರಾಬರಿ. ಒಂದು ಕ್ಷಣವೂ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.
ಶಂಕರ್ ಬಿದರಿ ನಿವೃತ್ತ ಡಿಜಿಯಾಗಿದ್ದವರು. ಅವರು ಪ್ರಹ್ಲಾದ್ ಜೋಶಿಗೆ ಟ್ವೀಟ್ ಮಾಡಿದ್ದಾರೆ. ಸಿಎಂ, ಮಕ್ಕಳು, ಮೊಮ್ಮಕ್ಕಳ ಕರೆಫ್ಟ್ ಬಗ್ಗೆ ತಿಳಿಸಿದ್ದಾರೆ. ನಾನೂ ತಿನ್ನಲ್ಲ, ತಿನ್ನೋಕೂ ಬಿಡಲ್ಲ ಅಂತ ಪ್ರಧಾನಿ ಹೇಳ್ತಿದ್ರು. ನಾ ಕಾಹೂಂಗಾ,ನಾ ಕಾನೇ ದೂಂಗಾ ಅಂತ ಹೇಳ್ತಿದ್ರು. 10% ಸರ್ಕಾರ ಅಂತ ಮೋದಿ ನಮಗೆ ಹೇಳ್ತಿದ್ರು. ಈಗ ಯಡಿಯೂರಪ್ಪನ ಭ್ರಷ್ಟಾಚಾರದ ಬಗ್ಗೆ ಏನ್ ಹೇಳ್ತಾರೆ ಎಂದು ಪ್ರಧಾನಿ ಮೋದಿಗೆ ಸಿದ್ಧರಾಮಯ್ಯ ಟಾಂಗ್ ನೀಡಿದರು.
ಸಿಎಂ ಪುತ್ರ,ಮೊಮ್ಮಗ,ಅಳಿಯ ಶಾಮೀಲಾಗಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ,ಅಳಿಯ ವೀರೂಪಾಕ್ಷಪ್ಪ ಮರಡಿ. ಮೊಮ್ಮಗ ಶಶಿಧರ್ ಮರಡಿ ಲಂಚ ಪಡೆಯುವಾಗ ಸಿಕ್ಕಿದ್ದಾರೆ. ಬಿಡಿಎ ನಿಂದ 576 ಕೋಟಿ ರೂ ಹೌಸಿಂಗ್ ಪ್ರಾಜೆಕ್ಟ್ ಗಾಗಿ ಟೆಂಟರ್ ಘೋಷಣೆ ಮಾಡಲಾಗಿತ್ತು. ಟೆಂಡರ್ ಆದ ಮೇಲೆ ಇಬ್ಬರು ಬಿಲ್ಡರ್ ಪಾರ್ಟಿಸಿಪೇಟ್ ಮಾಡ್ತಾರೆ. ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಕೂಡ ಇರುತ್ತೆ. ೬,೬೬,೨೨,೫೦೦ ಗೆ ಟೆಂಡರ್ ಸೆಟ್ಲ್ ಆಗುತ್ತೆ. ೩೩೧ ಕೋಟಿ ಡೆಪಾಸಿಟ್ ಮಾಡ್ತಾರೆ. ೨೨/೨/೨೦೨೦ ರಲ್ಲಿ ಇದಕ್ಕೆ ಒಪ್ಪಿಗೆ ಸಿಗುತ್ತೆ. ಜುಲೈ ೨೬/೨೦೧೯ ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಇವರು ಅಧಿಕಾರಕ್ಕೆ ಬರುತ್ತಲೇ ಇದಕ್ಕೆ ಒಪ್ಪಿಗೆ ಸಿಗುತ್ತೆ. ವಿಜಯೇಂದ್ರ ರಾಮಲಿಂಗಂ ಕಂಪನಿ ಟೆಂಡರ್ ಕ್ಲೋಸ್ ಬೆದರಿಕೆ ಹಾಕ್ತಾರೆ. ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡ್ತಾರೆ. ಪ್ರಾಜೆಕ್ಟ್ ಕಿಕ್ ಮುಂದುವರಿಕೆ ಕಿಕ್ ಬ್ಯಾಕ್ ಗೆ ಸೂಚನೆ ನೀಡ್ತಾರೆ ಎಂದು ಆರೋಪಿಸಿದರು.
ಬಿಡಿಎ ಆಯುಕ್ತ ಪ್ರಕಾಶ್ 12 ಕೋಟಿ ಹಣ ಪಡೆಯುತ್ತಾರೆ. ವಿಜಯೇಂದ್ರನಿಗೆ ಕೊಡ್ತೇನೆ ಅಂತ ಪ್ರಕಾಶ್ ತೆಗೆದುಕೊಳ್ತಾರೆ. ಈ ವೇಳೆ ಕಂಟ್ರಾಕ್ಟರ್ ಗೆ ವಿಜಯೇಂದ್ರ ಫೋನ್ ಮಾಡ್ತಾರೆ. ಹಣ ಬಂದಿಲ್ಲವಲ್ಲ ಅಂತ ಕೇಳ್ತಾರೆ. ಆದರೆ ಪ್ರಕಾಶ್ ಗೆ ಕೊಟ್ಟೆ ಅಂತ ಕಂಟ್ರಾಕ್ಟರ್ ಹೇಳ್ತಾರೆ. ವಿಜಯೇಂದ್ರ ಪ್ರಾಮಾಣಿಕರಾಗಿದ್ದರೆ ಕೇಸ್ ಹಾಕ್ಬೇಕಿತ್ತು. ಬಿಡಿಎ ಕಮೀಷನರ್, ಕಂಟ್ರಾಕ್ಟರ್ ಮೇಲೆ ಕೇಸ್ ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.
ಬಿಡಿಎ ಕಮೀಷನರ್ ಮಾಡೋಕೆ 15 ಕೋಟಿ ಕೊಟ್ಟಿದ್ದಾರೆ. ಪ್ರಕಾಶ್ ಯಡಿಯೂರಪ್ಪಗೆ ಕೊಟ್ಟಿದ್ದಾರೆ. ವಿಜಯೇಂದ್ರ ಕೇಳಿದ್ದಕ್ಕೆ ಪ್ರಕಾಶ್ ಇದನ್ನ ಮುಂದಿಡ್ತಾರೆ. ಕೊನೆಗೆ ಮತ್ತೊಮ್ಮೆ 7.40 ಕೋಟಿ ಹಣ ಆರ್ ಟಿಜಿಎಸ್ ಮಾಡ್ತಾನೆ. ಶಶಿಧರ್ ಮರಡಿ ಅಕೌಂಟ್ ಗೆ ಲಂಚದ ಹಣ ಬೀಳುತ್ತೆ. ಕಂಟ್ರಾಕ್ಟರ್ ಮರಡಿ ಅಕೌಂಟ್ ಗೆ ಹಾಕ್ತಾರೆ. ಶೇಷಾದ್ರಿಪುರಂನ ಹೆಚ್ಡಿಎಫ್ ಸಿ ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯವಾಗುತ್ತದೆ. ನಂತರ ಹುಬ್ಬಳ್ಳಿಯ ಸಿಎಂ ಅಳಿಯನಿಗೆ ಹಣ ಸಂದಾಯವಾಗುತ್ತೆ ಎಂದು ಸಿಎಂ,ಸಿಎಂ ಪುತ್ರನ ಕಿಕ್ ಬ್ಯಾಕ್ ಬಗ್ಗೆ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಸಿಎಂ ಅಳಿಯ ವಿರೂಪಾಕ್ಷಪ್ಪ ಈಗ ಡಿಸಿಎಂ ಕಾರಜೋಳ ಎಕ್ಸಿಕ್ಯೂಟೀವ್ ಆಗಿದ್ದಾರೆ. ಹಣ ಹೊಡೆದ ಸಿಎಂ ಅಳಿಯ ವಿರೂಪಾಕ್ಷಪ್ಪ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುರ್ಜೇವಾಲಾ ಹೇಳಿದ್ದಾರೆ. ದುರಾಡಳಿತ,ಭ್ರಷ್ಟಾಚಾರ ಎರಡೂ ಒಟ್ಟಿಗೆ ಹೋಗುತ್ತವೆ. ಇದನ್ನ ಮಹಾತ್ಮ ಗಾಂಧಿಯವರು ಹೇಳಿದ್ದರು. ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ3 ತಿಂಗಳಾಯ್ತು. ಈ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾನು, ಡಿಕೆಶಿ ಕೂಡ ಅನೇಕ ಭಾರಿ ಪ್ರಸ್ತಾಪಿಸಿದ್ದೇವೆ. ಸಿಎಂ ಕುಟುಂಬದವರ ಶಾಮೀಲು ಬಗ್ಗೆ ಹೇಳಿದ್ದೇವೆ. ನಾನು ಅನೇಕ ಬಾರಿ ಹೇಳಿದ್ದೇನೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಭ್ರಷ್ಟಾಚಾರದ ಮೂಲಕ ಈ ಮಾತು ಸಾಭೀತಾಗಿದೆ. ಕೊರೋನಾ ಸಂದರ್ಭದಲ್ಲೂ ಸರ್ಕಾರದ ಭ್ರಷ್ಟಾಚಾರ ಮಾಡಿದೆ. ಸದನದಲ್ಲೂ ನಾವು ಇದನ್ನ ಪ್ರಸ್ತಾಪಿಸಿದ್ದೇವೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದಲ್ಲ. ಮೆಡಿಕಲ್ ಕಿಟ್ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದೆವು. ರೇಟ್ ನಲ್ಲಿ ವೆರಿಯೇಶನ್ ಇದೆ ಅಂತ ಹೇಳ್ತಾರೆ. ವೇರಿಯೇಶನ್ ಅಷ್ಟೊಂದು ಇರೋಕೆ ಸಾಧ್ಯವೇ. ಈ ಸರ್ಕಾರ ಕರೆಫ್ಟ್ ಗೌರ್ಮೆಂಟ್ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಸಿಎಂ ಬಿಎಸ್ ವೈ ಪುತ್ರ,ಮೊಕ್ಕಳಿಂದ ಕರೆಫ್ಟ್ ನಡೆದಿದೆ- ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್
ಇದೇ ವೇಳೆ ಮಾತನಾಡಿದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇವತ್ತು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೇವೆ. ಸಿಎಂ ಬಿಎಸ್ ವೈ ಪುತ್ರ,ಮೊಕ್ಕಳಿಂದ ಕರೆಫ್ಟ್ ನಡೆದಿದೆ. ಬಿಡಿಎ ನಲ್ಲಿ 666 ಕೋಟಿ ರೂಗಳ ಭ್ರಷ್ಟಾಚಾರ ನಡೆದಿದೆ. ಸಿಎಂ ಪುತ್ರ ವಿಜಯೇಂದ್ರ, ಗುತ್ತಿಗೆದಾರ ನಡುವೆ ಭ್ರಷ್ಟಾಚಾರ ನಡೆದಿದೆ. ಆರ್ ಟಿಜಿಎಸ್ ಮೂಲಕವೇ ಹಣ ವರ್ಗಾವಣೆ ಮಾಡಲಾಗಿದೆ. ಕೊಲ್ಕತ್ತಾ ಬೆಂಗಳೂರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಸಿಎಂ ಪುತ್ರ,ಮೊಮ್ಮಗ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಇದು ಕೇವಲ ಆರೋಪವಲ್ಲ,ಸತ್ಯ ಇದರ ಸಂಪೂರ್ಣ ದಾಖಲೆಗಳು ನಮ್ಮಲ್ಲಿವೆ. ಹೀಗಾಗಿ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು . ಒಂದು ಸೆಕೆಂಡ್ ವೇಸ್ಟ್ ಮಾಡದೆ ರಾಜೀನಾಮೆ ಕೊಡಬೇಕು ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಈ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಚರ್ಚೆಯಾಗಲಿದೆ. ಪ್ರತಿಪಕ್ಷ ನಾಯಕರು ಎರಡೂ ಸದನದಲ್ಲಿ ಪ್ರಸ್ತಾಪ ಮಾಡ್ತಾರೆ. ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಇದರ ಬಗ್ಗೆ ವಿಶೇಷ ತನಿಖಾ ತಂಡಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಮನಿಲ್ಯಾಂಡ್ರಿಂಗ್ ಆ್ಯಕ್ಟ್ ಇಲ್ಲಿ ಉಲ್ಲಂಘನೆಯಾಗಿದೆ. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಇದರ ತನಿಖೆಯಾಗಬೇಕು- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್….
ವಿಜಯೇಂದ್ರ, ಕಂಟ್ರಾಕ್ಟರ್ ಕಿಕ್ ಬ್ಯಾಕ್ ಬಗ್ಗೆ ವಾಟ್ಸಾಪ್ ಸಂಭಾಷಣೆ ನಡೆದಿದ. 7.8 ಕೋಟಿ ಲಂಚದ ಬಗ್ಗೆ ಮಾತುಕತೆ ನಡೆದಿದೆ. ಸಿಎಂ ಮೊಮ್ಮಗ,ಅಳಿಯ ವಿರೂಪಾಕ್ಷಪ್ಪ ಹಣ ವರ್ಗಾವಣೆಗೆ ಸಹಕರಿಸಿದ್ದಾರೆ. ಬ್ಯಾಂಕ್ ಮೂಲಕವೇ ಹಣ ವರ್ಗಾವಣೆಯಾಗಿದೆ. ಶಶಿಧರ್ ಅಕೌಂಟ್ ಗೆ ಹವಾಲಾ ಹಣ ವರ್ಗಾವಣೆಯಾಗಿದೆ. ಕಂಟ್ರಾಕ್ಟರ್ ಆರ್ ಎಂಎಸ್,ಜಗದಾಂಬ ಕಂಪನಿಗೆ ಹಣ ವರ್ಗಾವಣೆಯಾಗಿದೆ. ಇವಕ್ಕೆ ಸಿಎಂ ಅಳಿಯ ಶಶಿಧರ್ ಎಂಡಿಯಾಗಿದ್ದಾರೆ. ಇವೆಲ್ಲವೂ ಕೊಲ್ಕತ್ತಾದಲ್ಲಿರುವ ಕಂಪನಿಗಳು. ವಿಎಸ್ ಎಸ್ ನಿಂದಲೂ ಕಿಕ್ ಬ್ಯಾಕ್ ಪಡೆದಿದ್ದಾರೆ. ಮನಿಲ್ಯಾಂಡ್ರಿಂಗ್ ಆ್ಯಕ್ಟ್ ಇಲ್ಲಿ ಉಲ್ಲಂಘನೆಯಾಗಿದೆ. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಇದರ ತನಿಖೆಯಾಗಬೇಕು. ಸುಪ್ರೀಂ ಇಲ್ಲವೇ ಹೈಕೋರ್ಟ್ ಜಡ್ಜ್ ಸಮಿತಿ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
Key words: CM BSY- family-curruptioncongress leader- Siddaramaiah- urge- Resigns – CM- position