ಬೆಂಗಳೂರು,ಜೂನ್,25,2021(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ವಿಚಾರ ಗೊಂದಲ ಉಂಟುಮಾಡಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಬೇರೆ ಪಕ್ಷದಿಂದ ಬಂದ ಸಿದ್ಧರಾಮಯ್ಯಗೆ ಈಗಾಗಲೇ ಸಿಎಂ ಸ್ಥಾನ ಕೊಟ್ಟಾಗಿದೆ. ಡಿ.ಕೆ ಶಿವಕುಮಾರ್ ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದಾರೆ. ಅವರಿಗೆ ಅವಕಾಶ ನೀಡಬೇಕು. ಇನ್ನು ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಇದ್ದಾರೆ ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಸಿದ್ಧರಾಮಯ್ಯಗೆ ಕ್ಷೇತ್ರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಇದೆ. ಅವರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಈ ಸಂದರ್ಭದಲ್ಲಿ ಸಿಎಂ ಎಂದು ಹೇಳುವುದು ಸರಿಯಲ್ಲ. ಚುನಾವಣೆಯಲ್ಲಿ ಗೆದ್ಧ ಬಳಿ ಚರ್ಚೆ ಮಾಡಬೇಕಾಗುತ್ತದೆ. ಸಿಎಂ ಆಗಿದ್ದವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದೇಕೆ..? ಶಿಷ್ಯಂದಿರು ಎಲ್ಲವನ್ನು ಮಾತನಾಡುತ್ತಾರೆ. ಶಿಷ್ಯಂದಿರು 150 ಸೀಟು ಬರುತ್ತೆ ಎನ್ನುತ್ತಾರೆ. ಆದ್ರೆ 130 ಸ್ಥಾನವಿದ್ದ ಕಾಂಗ್ರೆಸ್ ಗೆ 70 ಸ್ಥಾನ ಏಕೆ ಬಂತು ಎಂದು ಟಾಂಗ್ ನೀಡಿದರು.
ಸಿಎಂ ಸ್ಥಾನ ಎಂದರೆ ಉಂಡಿ ಬಿಸಾಡುವುದು ಅಲ್ಲ. ಸ್ವಚ್ಛವಾಗಿಟ್ಟುಕೊಂಡು ಮುಂದಿನವರಿಗೆ ಅವಕಾಶ ನೀಡಬೇಕು. ಸಿದ್ಧರಾಮಯ್ಯ ಅವರೆ ಜಮೀರ್ ಮುಂದಿಟ್ಟುಕೊಂಡು ಹೋದರೆ ನಿಮಗೆ ಒಳ್ಳೆಯದಾಗಲ್ಲ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.
Key words: CM Candidate –Issues-against- Siddaramaiah-batting – DK Sivakumar –H.Vishwanath.