ಬೆಂಗಳೂರು,ಡಿಸೆಂಬರ್,31,2020(www.justkannada.in): ಸಿಎಂ ಖುರ್ಚಿಯೇ ಅಲುಗಾಡುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ. ನಾಳೆಯೇ ಅಸೆಂಬ್ಲಿ ಚುನಾವಣೆ ನಡೆದರೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಗ್ರಾಪಂ ಚುನಾವಣೆಯ ಮತ ಎಣಿಕೆ ಇನ್ನು ನಡೆಯುತ್ತಿದೆ. ಆಗಲೇ ಬಿಎಸ್ ಯಡಿಯೂರಪ್ಪ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ ಅಂತಿದ್ದಾರೆ. ಸಿಎಂ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಗ್ರಾಮಪಂಚಾಯಿತಿ ಚುನಾವಣೆ ಪಕ್ಷಗಳ ಚಿಹ್ನೆ ಮೇಲೆ ನಡೆಯಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಅರಾಜಕತೆ ಉಂಟಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಐಪಿಎಸ್ ಅಧಿಕಾರಿಗಳು ಹಾದಿರಂಪ ಬೀದಿ ರಂಪ ಮಾಡಿದ್ರು. ಆದರೆ ಸರ್ಕಾರ ಇದನ್ನ ತಡೆಯಲು ಆಗಲಿಲ್ವಾ..? ಎಂದು ಸಿದ್ಧರಾಮಯ್ಯ ಟೀಕಿಸಿದರು.
ಬ್ರಿಟನ್ ನಿಂದ ಬಂದವರು ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಏರ್ ಪೋರ್ಟ್ ಗೆ ಬಂದವರು ಕದ್ದು ಓಡಲು ಆಗುತ್ತಾ..? ಏರ್ ಪೋರ್ಟ್ ನಲ್ಲೇ ತಪಾಸಣೆ ಮಾಡಬಹುದಿತ್ತಲ್ಲವೇ,,.? ಕೊರೋನಾ ನ್ಯಾಚುರಲ್ ಆಗಿ ಕಡಿಮೆಯಾಗಿದೆ ಅಷ್ಟೆ ಎಂದರು.
Key words: CM chair- shaking-elections -held –tomorrow-congress-power-Former CM -Siddaramaiah