ಬೆಂಗಳೂರು,ಜೂನ್,17,2023(www.justkannada.in): ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಇಲ್ಲವೆಂದು ಅಲ್ಲಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಿಳಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಅಕ್ಕಿ ಖರೀದಿ ವಿಚಾರ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ , ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರ ಜೊತೆ ನಾನೆ ಮಾತನಾಡಿದ್ದೇನೆ. ಆಂಧ್ರ ಸರ್ಕಾರದ ಜೊತೆ ಚರ್ಚಿಸುವಂತೆ ಸಿಎಸ್ಗೆ ಹೇಳಿದ್ದೇನೆ. ಛತ್ತೀಸ್ಗಢದವರು 1.5 ಲಕ್ಷ ಟನ್ ಅಕ್ಕಿ ಕೊಡಲು ಸಮ್ಮತಿಸಿದ್ದಾರೆ. ಆದರೆ ದರ ಸ್ವಲ್ಪ ದುಬಾರಿ ಇದೆ, ಸಾಗಣೆ ವೆಚ್ಚವೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಕಮಿಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಎಂಬ ಶಾಸಕ ಬಿವೈ ವಿಜಯೇಂದ್ರ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ಧರಾಮಯ್ಯ, ರಾಜ್ಯದಲ್ಲೇ ಅಕ್ಕಿ ಸಿಗುವುದಿದ್ದರೇ ಶಾಸಕ ಬಿವೈ ವಿಜಯೇಂದ್ರ ಕೊಡಿಸಲಿ. ಬಿವೈ ವಿಜಯೇಂದ್ರ ಮಿಲ್ ನಲ್ಲಿ ಎಷ್ಟು ಅಕ್ಕಿ ಇದೆ ಅದನ್ನ ಕೊಡಲಿ ಬಿಜೆಪಿಯವರು ಸುಮ್ಮನೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words: CM Chandrasekhar Rao – rice – no stock – Telangana – CM Siddaramaiah