ಸಿಎಂ ಬದಲಾವಣೆ ವಿಚಾರ: ಬಿಎಸ್ ವೈ ಪರ ಬ್ಯಾಟ್ ಬೀಸಿದ ‘ಕೈ’ ನಾಯಕ.

 

ಬೆಂಗಳೂರು,ಜುಲೈ,20,2021(www.justkannada.in ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾದ ಬಳಿಕ ಮತ್ತೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದ್ದು ಈ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ಪರ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಬ್ಯಾಟ್ ಬೀಸಿದ್ದಾರೆ.jk

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಎಂ.ಬಿ ಪಾಟೀಲ್, ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯೂರಲು ಬಿ.ಎಸ್ ಯಡಿಯೂರಪ್ಪ ಅವರೇ ಕಾರಣ. ಬಿಎಸ್ ವೈ ದೆಹಲಿಗೆ ಹೋದಾಗ ಹಲವು ಬೆಳವಣಿಗೆಗಳು ಆಗಿವೆ.  ಹೈಕಮಾಂಡ್ ಬಿಎಸ್ ವೈಗೆ ರಾಜೀನಾಮೆ ನೀಡಲು ಸೂಚನೆ ನೀಡಿದೆ ಎಂಬ ಸುದ್ದಿ ಇದೆ. ಬಿಎಸ್ ವೈ ಅವರನ್ನ ಅನುಭವಕ್ಕೆ ತಕ್ಕಂತೆ ನಡೆಸಿಕೊಳ್ಳಬೇಕು. ಬಿಎಸ್ ವೈ ಅವರನ್ನ ಮೂಲೆಗುಂಪು ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಹಾಗೆಯೇ ನನ್ನ ಟ್ವಿಟ್ ಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ.  ನನ್ನ ಹೇಳಿಕೆಗೂ ಕಾಂಗ್ರೆಸ್ ಗೂ ತಳುಕು ಹಾಕಬೇಡಿ. ಇದರಿಂದ ಕಾಂಗ್ರೆಸ್ ಲಾಭ ನಷ್ಟದ ಮಾತು ಇಲ್ಲ. ಲಿಂಗಾಯಿತ ನಾಯಕನಾಗಿ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ENGLISH SUMMARY…

Change of CM: Congress leader supports BSY
Bengaluru, July 20, 2021 (www.justkannada.in): Congress leader M.B. Patil has supported Chief Minister B.S. Yediyurappa over the rumors of a change in BJP leadership following the visit of Yediyurappa with the party national leaders in New Delhi.
“If BJP is in power in the State today B.S. Yediyurappa is the reason. Several developments have taken place following the visit of Yediyurappa to New Delhi. Rumors are making rounds that the BJP High Command has asked him to resign. BSY should be treated respectfully. It is incorrect to sideline,” him he said in his tweet.
His tweet also read that there is no link with this tweet and Congress party and he has expressed his view only as a Lingayat leader.
Keywords: Former Minister/ Congress leader/ M.B. Patil/ B.S. Yediyurappa/ Chief Minister/ change in leadership

Key words: CM- Change- Issue-congress leader-MB patil