ಮೈಸೂರು,ನವೆಂಬರ್,26,2020(www.justkannada.in): ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿರಾಕರಿಸಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಮಾಧ್ಯಮದವರ ಪ್ರಶ್ನಗೆ ಉತ್ತರಿಸಲು ನಿರಾಕರಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕಾಗಿ ಪಕ್ಷದ ಹೈಕಮಾಂಡ್ ಇದೆ ಹಿರಿಯ ನಾಯಕರಿದ್ದಾರೆ. ಸಿಎಂಗೆ ಕಾರ್ಯದೋತ್ತಡ ಇದ್ದೆ ಇರುತ್ತೆ. ಉಪಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಇದಕ್ಕಾಗಿ ಹೀಗ್ಗಿ ಹೀರೇಕಾಯಿ ಆಗಬೇಕಿಲ್ಲ ಎಂದು ಪರೋಕ್ಷ ಟಾಂಗ್ ನೀಡಿದರು.
ಮೈಸೂರಿನಲ್ಲಿ ಗುರುವಾರ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಯಡಿಯೂರಪ್ಪ ಮೇಲೆ ಹೈಕಮಾಂಡ್ ಒತ್ತಡ ಇದೆ ಎಂಬ ವಿಚಾರ. ಯಡಿಯೂರಪ್ಪ ಮುಳ್ಳಿನ ಮೇಲೆ ಪಂಚೆ ಹಾಕಿದ್ದಾರೆ. ಪಂಚೆಯನ್ನ ಮುಳ್ಳಿನಿಂದ ಹುಷಾರಾಗಿ ತೆಗಿಬೇಕು. ಅಧಿಕಾರ ನಡೆಸುವುದು ಬಹಳ ಕಠಿಣ ಕೆಲಸ. ಸಿಎಂಗೆ ಇನ್ನು ಬಾಕಿ ಇರೋದು ಎರಡೂವರೆ ವರ್ಷ ಅಷ್ಟೇ. ಅಷ್ಟರೋಳಗಡೆ ಏನಾದ್ರು ಮಾಡಬೇಕಲ್ಲವೇ? ಎಂದರು.
ನಿಗಮ- ಮಂಡಳಿ ನೇಮಕ ವಿಚಾರ: ಬಹಿರಂಗ ಅಸಮಾಧಾನ ಹೊರ ಹಾಕಿದ ಶ್ರೀನಿವಾಸ್ ಪ್ರಸಾದ್
ನಿಗಮ- ಮಂಡಳಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗ ಅಸಮಾಧಾನ ಹೊರ ಹಾಕಿದ ಸಂಸದ ಶ್ರೀನಿವಾಸ್ ಪ್ರಸಾದ್, ನಿಗಮ- ಮಂಡಳಿ ನೇಮಕ ವಿಚಾರದಲ್ಲಿ ನನಗೆ ಅತೃಪ್ತಿ ಇದೆ. ಅದನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು. ಎಲ್ಲರೊಂದಿಗೆ ಚರ್ಚಿಸಿ ನೇಮಕ ಮಾಡಿದ್ದರೆ ಇನ್ನೂ ಚನ್ನಾಗಿ ಆಗುತ್ತಿತ್ತು. ಅವರಿಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಆದ್ದರಿಂದ ನನಗೆ ಬೇಸರ ಆಗಿದೆ ಅಂತ ನಾನು ಹೇಳಿದ್ದೇನೆ ಎಂದು ತಿಳಿಸಿದರು.
ಸಚಿವ ಸಂಪುಟದ ಪುನರ್ ರಚನೆ ಬೇಡ.
ರಾಜ್ಯ ಸಚಿವ ಸಂಪುಟ ವಿಸ್ತರಸೆಯೋ.? ಪುನರ್ ರಚನೆಯೋ ಎಂಬ ಗೊಂದಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಈಗಿರುವ ಸಚಿವ ಸಂಪುಟವನ್ನು ವಿಸ್ತರಣೆ ಮಾಡಬೇಕು. ಸಚಿವ ಸಂಪುಟದ ಪುನರ್ ರಚನೆ ಬೇಡ. ಉಳಿದ ಸ್ಥಾನಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ಸಲಹೆ ನೀಡಿದರು.
ಯಡಿಯೂರಪ್ಪ ಅವರಿಗೆ ಬುದ್ಧಿವಂತಿಕೆ, ತಾಳ್ಮೆ ಬೇಕು…
ಮುಖ್ಯಮಂತ್ರಿ ಅಂದ ಮೇಲೆ ಒತ್ತಡ ಇದ್ದೇ ಇರುತ್ತೆ. ಆದ್ರೆ ಯಡಿಯೂರಪ್ಪ ಅವರಿಗೆ ಬುದ್ಧಿವಂತಿಕೆ, ತಾಳ್ಮೆ ಬೇಕು. ಯಡಿಯೂರಪ್ಪ ಬದಲಾಗಿದ್ದಾರೆ ಅಂತ ಹೇಳುವುದಿಲ್ಲ. ಬದಲಾಗಿಲ್ಲ ಅಂತಲೂ ಹೇಳುವುದು ಕಷ್ಟ. ಅಧಿಕಾರಿ ಬಂದಾಗ ಸ್ವಲ್ಪ ಬದಲಾವಣೆ ಆಗೋದು ಸಹಜ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಇತ್ತು, ಆದ್ರೆ ಬುದ್ದಿವಂತಿಕೆ ಇರಲಿಲ್ಲ. ಆದ್ದರಿಂದಲೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಚುನಾವಣೆಯಲ್ಲೂ ಸೋಲು ಅನುಭವಿಸಬೇಕಾಯಿತು. ಕಡೆಗೆ ಸಿದ್ದರಾಮಯ್ಯನಿಗೆ ಏನಾಯ್ತು ಅನ್ನೋದು ನಿಮಗೆ ಗೊತ್ತಿದೆ ಅಲ್ವ ? ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದರು.
ಕೇಂದ್ರದಲ್ಲಿ ಮಂತ್ರಿಯಾಗುವ ಆಸೆ ಇಲ್ಲ.
ಕೇಂದ್ರ ಸಚಿವ ಸ್ಥಾನ ಕುರಿತು ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಕೇಂದ್ರದಲ್ಲಿ ಮಂತ್ರಿಯಾಗುವ ಆಸೆ ಇಲ್ಲ. ಈಗಾಗಲೇ ಅದನ್ನು ಪಕ್ಷದ ಹೈಕಮಾಂಡ್ ಗೂ ಸ್ಪಷ್ಟವಾಗಿ ತಿಳಿಸಿದ್ದೇನೆ. ಒಂದು ಡಜನ್ ಎಲೆಕ್ಷನ್ ನಲ್ಲಿ ಸ್ಪರ್ಧೆ ಮಾಡಿ ನನಗೆ ಸಾಕಾಗಿದೆ. ಚುನಾವಣೆ ಬೇಡವೆಂದೇ ಕುಳಿತಿದ್ದವನು ನಾನು. ಕೊನೆ ಘಳಿಗೆಯಲ್ಲಿ ಎಲ್ಲರ ಒತ್ತಡಕ್ಕೆ ಮಣಿದು ಚುನಾಚಣೆಗೆ ಸ್ಪರ್ಧೆ ಮಾಡಿದೆ. ಆದರೆ ಪಾರ್ಲಿಮೆಂಟ್ ನಲ್ಲಿ ನನ್ನ ಬ್ಯಾಚ್ ಮೇಟ್ಸ್ ಒಬ್ರೂ ಇಲ್ಲ. 1980ರ ಬ್ಯಾಚ್ ನಲ್ಲಿನ ಸದ್ಯ ಉಳಿದಿರೋದು ನಾನೊಬ್ಬನೆ. ನನಗೆ ಇನ್ನಾವ ರಾಜಕೀಯ ಆಸೆಯೂ ನನಗಿಲ್ಲ ಎಂದರು.
ಸಿದ್ದರಾಮಯ್ಯ ನನಗೆ ಮಾಡಿದ ದ್ರೋಹಕ್ಕೆ ತಕ್ಕ ಉತ್ತರ ನೀಡಿರುವೆ. ಕೇಂದ್ರದಲ್ಲಿ ಮತ್ತೆ ಮಂತ್ರಿ ಆಗಬೇಕೆಂಬ ಎಳ್ಳಷ್ಟು ಆಸೆ ನನಗಿಲ್ಲ. ಇಡೀ ನನ್ನ ರಾಜಕೀಯ ಜೀವನದ ಬಗ್ಗೆ ಸಂತೃಪ್ತ ಭಾವನೆ ಇದೆ. ಹಾದಿ ಬೀದಿಯಲ್ಲಿ ಕೆಲವರು ರಾಜಕೀಯ ಮತ್ಸರಕ್ಕೆ ಆಡೋ ಮಾತುಗಳಲ್ಲಿ ಸತ್ಯವಿಲ್ಲ. ನಾನೆಂದೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದವನಲ್ಲ. ನನ್ನ ಬಗ್ಗೆ ಮಾತನಾಡುವವರು ಎದೆ ಮುಟ್ಟಿಕೊಂಡು ಹೇಳಲಿ ಎಂದು ಹೇಳಿದರು.
English summary..
Replacement to CM BSY: MP Srinivas Prasad refuses to react
Mysuru, Nov. 26, 2020 (www.justkannada.in): Chamarajangara MP V. Srinivas Prasad today refused to give his reaction to the ongoing rumours of the possibility of replacing the Chief Minister in Karnataka.
“I won’t respond to this topic. The party high command and senior leaders are there to answer this question. A chief minister will always have work pressure. The recent byelection results are good, but you shouldn’t become over confident only from that,” he said sarcastically.
In his reaction to the question on appointment of heads to the various Corporations Srinivas Prasad said he was satisfied in that matter and in fact it could have been handled in a better way. “It would have been nice if they would have arrived at a decision after discussing with everyone. But they have appointed whomever they want. Hence, I would personally like to say that I am not satisfied,” he said.
In his reaction to the question on cabinet reshuffle he opined that there is a need of expanding the cabinet whereas there is no need of reshuffling.
Keywords: Replacement to CM-State Government-MP V. Srinivas Prasad-Cabinet reshuflfe
Key words: cm- change- issue-MP –Shrinivas Prasad- reaction