ಬೆಂಗಳೂರು,ಜೂನ್,16,2021(www.justkannada.in): ಸಿಎಂ ಬದಲಾವಣೆ ಪ್ರಸ್ತಾಪ ಇಟ್ಟಿರೋದು ನಿಜ. ಕೆಲವರು ಬೇಡಿಕೆ ಇಟ್ಟಿದ್ದಾರೆ. ಕೆಲವರು ಸಿಎಂ ಮುಂದುವರೆಯುವಂತೆ ಬೇಡಿಕೆ ಇಟ್ಟಿದ್ದಾರೆ. ಬದಲಾವಣೆಯಾಗುತ್ತೋ ಏನ್ ಬೇಕಾದರೂ ಆಗಬಗುದು. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ರಾಜ್ಯ ಬಿಜೆಪಿಯಲ್ಲಿ ಗೊಂದಲವಿರುವುದನ್ನ ಒಪ್ಪುತ್ತೇನೆ. ಸಿಎಂ ಬಿಎಸ್ ವೈ ಸುತ್ತಲಿನವರು ಇಲಾಖೆಯಲ್ಲಿ ಮೂಗು ತೂರಿಸುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಅನಿಸಿದವರು ಅರುಣ್ ಸಿಂಗ್ ಬಳಿ ಹೇಳಿಕೊಳ್ಳಬಹುದು. ನಾಳೆ ಬೆಳಿಗ್ಗೆಯಿಂದ ಸಂಜೆ ವರೆಗೆ ಸಿಎಂ ಬಿಎಸ್ ವೈ ಅವರ ಅರೂಣ್ ಸಿಂಗ್ ಜತೆ ಇರಲ್ಲ. ಈ ವೇಳೆಯಲ್ಲಿ ಹೇಳಿಕೊಳ್ಳಬಹುದು ಎಂದರು.
17 ಜನರು ಬಂದಿದ್ದರಿಂದ ಗೊಂದಲವಾಗಿದೆ ಎಂದು ಹೇಳಲ್ಲ. ನಮಗೆ ಪೂರ್ಣ ಬಹುಮತ ಬಂದಿದ್ದರೇ ಈ ರೀತಿ ಗೊಂದಲ ಆಗುತ್ತಿರಲಿಲ್ಲ. 17 ಜನರು ಬಂದಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರ ಋಣ ನಮ್ಮ ಮೇಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
Key words: CM –change- proposal – real-Minister -KS Eshwarappa