ಮೈಸೂರು, ಜೂನ್,1,2021(www.justkannada.in): ಸದ್ಯಕ್ಕೆ ಯಡಿಯೂರಪ್ಪನವರೆ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ ನಾಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಹೀಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಬಿಜೆಪಿ ಸರ್ವಾನುಮತದಿಂದ ಯಡಿಯೂರಪ್ಪನವರನ್ನ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದು. ಆದರೆ ಸರ್ವಾನುಮತದಿಂದ ಸಾಧ್ಯವಿಲ್ಲ ಎಂದು ಹೇಳಿದರು.
ಯಾರು ದೆಹಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರ ನನಗೇನು ಗೊತ್ತಿಲ್ಲ, ನನಗೆ ಸಂಬಂಧವಿಲ್ಲ. ವಿಜಯೇಂದ್ರ ಅವರು ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ವೈಯುಕ್ತಿಕ ಕಾರಣಕ್ಕು ಹೋಗಿರಬಹುದು. ಸದ್ಯ ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿ.ಟಿ ರವಿ ತಿಳಿಸಿದರು.
ನಾವು ಕಾಂಗ್ರೆಸ್ ನ್ನು ಜವಾಬ್ದಾರಿ ಪಕ್ಷ ಎಂದುಕೊಂಡಿದ್ದೆವು. ಇದರಿಂದ ಕೋವಿಡ್ ಸಂದರ್ಭದಲ್ಲಿ ಸಹಕಾರದ ನಿರೀಕ್ಷೆ ಮಾಡಿದ್ದೆವು. ಸಹಕಾರದ ಬದಲು ಟೂಲ್ ಕಿಟ್ ಮೂಲಕ ಅರಾಜಕತೆ ಹುಟ್ಟುಹಾಕಿದ್ದಾರೆ. ಅಕ್ಸಿಜನ್ ಕೊರತೆ ಉಂಟಾದಾಗ ಅದನ್ನು ಸಮರ್ಥವಾಗಿ ಸಮಸ್ಯೆ ಪರಿಹಾರ ಹುಡುಕಿದ್ದೇವೆ. ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡಲಾಗುತ್ತಿದೆ. ಹೊಸ ಹೊಸ ಸವಾಲು ಬಂದಾಗ ಅದನ್ನು ಹೆದರಿಸುತಿದ್ದೇವೆ. ಆದ್ರೆ ಕಾಂಗ್ರೆಸ್ ಮಾತ್ರ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರಿಗೆ ಕೊರೊನಾ ಚೀನಿ ವೈರಸ್ ಎಂದು ಕರೆಯಲು ಧೈರ್ಯವಿಲ್ಲ. ಇಂಡಿಯನ್ ವೈರಸ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಕೊರೊನಾವನ್ನು ವಿಜೃಂಭಿಸುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಮೆದುಳು ಗುಲಾಮಗಿರಿಯ ತತ್ವವನ್ನ ಒಪ್ಪಿಕೊಂಡಿದೆ-ಸಿದ್ದು ವಿರುದ್ಧ ಗುಡುಗು.
ಮೋದಿ ಆಡಳಿತ 70 ವರ್ಷ ನಮ್ಮನ್ನ ಹಿಂದಕ್ಕೆ ಕರೆದ್ಯೊಯ್ತು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಿರುಗೇಟು ನೀಡಿದ ಸಿ.ಟಿ ರವಿ, ಕಾಂಗ್ರೆಸ್ ನಲ್ಲಿ ಗುಲಾಮಗಿರಿಯ ರಾಜಕಾರಣ ಮಾತ್ರ ಇರೋದು. ಅದರಲ್ಲಿ ನೀವು ಸೇರಿಕೊಂಡಿದ್ದೀರಿ. ಅದಕ್ಕಾಗಿ ನಿಮ್ಮ ಮೆದುಳು ಗುಲಾಮಗಿರಿಯ ತತ್ವವನ್ನ ಒಪ್ಪಿಕೊಂಡಿದೆ. ಹೀಗಾಗಿ ನೀವು ಹೀಗೆ ಮಾತನಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ನಿಮ್ಮ ಮೆದುಳು 70 ವರ್ಷ ಹಿಂದಕ್ಕೆ ಹೋಗಿದ್ಯೋ. ನಿಮ್ಮ ಆಲೋಚನಾ ಶಕ್ತಿಯೇ ಕಳೆದು ಹೋಗಿದ್ಯೋ? ರಾಜ್ಯದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ ದೇಶವನ್ನ ಹಿಂದಕ್ಕೆ ತೆಗೆದುಕೊಂಡು ಹೋಗಿರೋದಾ? ನಿಮಗೆ ಪಟ್ಟಿ ಕೊಡಲಾ ದೇಶಕ್ಕೆ ಹಿಂದಕ್ಕೆ ಹೋಗಿದ್ದು ಯಾವಾಗ ಯಾರಿಂದ ಅಂತ? ಕಾಂಗ್ರೆಸ್‌ನಿಂದಲೇ ದೇಶ ಹಿಂದಕ್ಕೆ ಹೋಗಿರೋದು ಎಂದು ಟಾಂಗ್ ನೀಡಿದರು.
ಮಲ್ಯ, ನೀರವ್ ಮೋದಿಯಂತವರಿಗೆ ಸಾಲ ಕೊಟ್ಟಿದ್ದು ಮೋದಿಯಲ್ಲ.
ಕಾಂಗ್ರೆಸ್ ನಲ್ಲಿ ಗುಲಾಮರಿಗೆ ಮಾತ್ರ ಅವಕಾಶ. ಸತ್ಯ ಹೇಳುವವರಿಗೆ ಅವಕಾಶ ಇಲ್ಲ. ಸತ್ಯ ಹೇಳಿದ್ರೆ ಸಿದ್ದರಾಮಯ್ಯರನ್ನ ಕಾಂಗ್ರೆಸ್‌ನಿಂದ ಹೊರಗೆ ಹಾಕ್ತಾರೆ ಅನ್ನೋ ಆತಂಕ ಇದೆ. ಆದ್ರೆ ಸತ್ಯವೆಲ್ಲ ಸಿದ್ದರಾಮಯ್ಯಗೆ ಗೊತ್ತಿದೆ. ಮಲ್ಯ, ನೀರವ್ ಮೋದಿಯಂತವರಿಗೆ ಸಾಲ ಕೊಟ್ಟಿದ್ದು ಮೋದಿಯಲ್ಲ. ಚಿದಂಬರಂ, ಸೋನಿಯಾ ಗಾಂಧಿಯವರು ಸಹಕಾರದಿಂದ ಸಿಕ್ಕಿದ್ದು. ದೇಶವನ್ನು ಹಿಂತೆಗೆದುಕೊಂಡು ಹೋಗುವ ಕೆಲಸ ಮೋದಿ ಮಾಡಿಲ್ಲ. ಕೋವಿಡ್ ನಡುವೆಯು ಅತ್ಯಂತ ಜನಪ್ರಿಯ ಪ್ರಧಾನಿ ಮೋದಿಯವರೇ ಮೋದಿ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿಲ್ಲ. ಅತಿ ಹೆಚ್ಚು ಸಾಲ ಮಾಡಿದವರು ಸಿದ್ದರಾಮಯ್ಯ ಅವಧಿಯಲ್ಲಿ. ಯಾವ ಶಾಶ್ವತ ಯೋಜನೆಯನ್ನು ಮಾಡದೆ ಸಾಲ ಮಾಡಿದ್ದಾರೆ ಎಂದು ಸಿದ್ದರಾಮಯ್ಯರ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದರು.
Key words: CM – currently –BS Yeddyurappa-BJP-CT Ravi -mysore