ಬೆಂಗಳೂರು,ಜನವರಿ,20,2022(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಆದರೆ ತೀವ್ರತೆ ಮಾತ್ರ ಕಡಿಮೆ ಇದೆ. ಹೀಗಾಗಿ ಜನರಿಗೆ ಒಳ್ಳೆಯದಾಗುವ ರೀತಿ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಕಠಿಣ ನಿಯಮಗಳ ಸಡಿಲದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಸುಳಿವು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಕೊರೋನಾ ತೀವ್ರತೆ ಇಲ್ಲದಿರುವುದರಿಂದ ನಿಯಮ ಮುಂದುವರಿಕೆ ಕಷ್ಟ. ಜನರ ಬದುಕು ಕಷ್ಟರವಾಗಿದೆ. ಇದು ಸಿಎಂ ಗಮನದಲ್ಲಿದೆ. ಹೀಗಾಗಿ ಜನರಿಗೆ ಒಳ್ಳೆಯದಾಗುವ ರೀತಿ ತೀರ್ಮಾನ ಕೈಗೊಳ್ಳಲಿದ್ದಾರೆ. ಹಾಗೆಯೇ ಕಾಲೇಜಿನ ಮೇಲಿನ ನಿರ್ಬಂಧಗಳು ತೆರವು ಆಗಬೇಕು ಎಂದರು.
ವೀಕೆಂಡ್ ಕರ್ಫ್ಯೂಗೆ ಬಿಜೆಪಿ ನಾಯಕರಿಂದಲೇ ವಿರೋಧ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್, ನಮ್ಮವರ ಹೇಳಿಕೆ ಸರ್ಕಾರ ಮೇಲೆ ಒತ್ತಡ ಎಂದು ಹೇಳಲಾಗಲ್ಲ. ಈ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದರು.
Key words: CM- decision – good – people- Minister -Ashwath Narayan.