ಬಳ್ಳಾರಿ,ಜೂನ್,22,2022(www.justkannada.in): ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಹೊರ ಬಂದು ಬಹಳ ದಿನಗಳಾದರೂ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಮಾಜಿ ಸಚಿವ ಜನಾರ್ಧನ ರೆಡ್ಡಿ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹೌದು, ನಾನು ಮನಸ್ಸು ಮಾಡಿದರೆ ಇವತ್ತೆ ಮುಖ್ಯಮಂತ್ರಿ ಆಗ್ತೀನಿ. ರೆಡ್ಡಿ-ರಾಮುಲು ಸಹೋದರರಿಗೆ ದುಡ್ಡಿನ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅಚ್ಚರಿ ಮೂಡಿಸಿದ್ದಾರೆ.
ನಿನ್ನೆ ಸಂಜೆ ಜರುಗಿದ್ಧ ಸೋಮಶೇಖರ್ ರೆಡ್ಡಿ ಹುಟ್ಟುಹಬ್ಬದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ನನಗೆ ಶಾಸಕ, ಮಂತ್ರಿ ಆಗೋ ಆಸೆ ಇಲ್ಲ. ನಾನು ಮನಸ್ಸು ಮಾಡಿದರೆ ಒಂದು ದಿನ ಆದರೂ ಸಿಎಂ ಆಗಬಹುದು. ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದ್ರು. ಬಳ್ಳಾರಿ ನಗರಸಭೆ ಅಧ್ಯಕ್ಷರಾಗಿ ಸೋಮಶೇಖರ್ ರೆಡ್ಡಿ ಇದ್ರು.
ಕೆಲವರು ನನಗೆ ಕೊಡಲಾರದ ಕಷ್ಟ ಕೊಟ್ಟರು. ಆದ್ರೂ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ನನ್ನ ಮೇಲೆ ಬಳ್ಳಾರಿ ಕನಕ ದುರ್ಗಮ್ಮನ ಆಶೀರ್ವಾದ ಇದೆ. ನನ್ನ ಜಾಗದಲ್ಲಿ ಯಾರೇ ಇದ್ದರೂ ನನ್ನ ಸಮಸ್ಯೆ ಎದುರಿಸಲು ಆಗುತ್ತಿರಲಿಲ್ಲ. ಅಷ್ಟು ತೊಂದರೆ ನನಗೆ ಕೊಟ್ಟರು. ರೆಡ್ಡಿ ಅವರೇ ನಿಮಗೆ ತೊಂದರೆ ಮಾಡಬೇಕಂತ ಮೇಲಿನ ಆದೇಶ ಇದೆ ಎಂದು ನನ್ನ ಬಂಧನ ಮಾಡಲು ಬಂದಿದ್ದ ಸಿಬಿಐ ಅಧಿಕಾರಿಗಳು ಖುದ್ದು ಹೇಳಿದ್ರು. ಆದರೆ ಬಳ್ಳಾರಿ ಮಂದಿಯಲ್ಲಿ ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ಅಂತಲೂ ಸಿಬಿಐನವರೇ ಹೇಳಿದ್ರು ಎಂದು ಜನಾರ್ದನ ರೆಡ್ಡಿ ತಿಳಿಸಿದರು.
Key words: CM- Former Minister -Janardhan Reddy- statement