ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್‌ಗೆ ಅಲ್ಲ‌ ಎಂದ್ರು ಡಿಸಿಎಂ ಡಾ.ಜಿ. ಪರಮೇಶ್ವರ್….

ಮೈಸೂರು,ಜೂ,24,2019(www.justkannada.in): ಮುಖ್ಯಮಂತ್ರಿ ಅಂದರೆ ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಹೀಗಾಗಿ ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್‌ಗೆ ಅಲ್ಲ‌ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಡಾ.ಜಿ. ಪರಮೇಶ್ವರ್,   ಸಿಎಂ ಹೆಚ್,ಡಿ ಕುಮಾರಸ್ವಾಮಿ ಜೆಡಿಎಸ್‌ಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯೂ ಹೌದು‌. ಆದ್ದರಿಂದ ಅವರ ಗ್ರಾಮ ವಾಸ್ತವ್ಯದ ಕ್ರೆಡಿಟ್ ಮೈತ್ರಿ ಸರ್ಕಾರಕ್ಕೆ ಸಲ್ಲುತ್ತೆ ಎಂದರು.

ನಾನೂ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಯಾವಾಗಿನಿಂದ ಶುರುವಾಗುತ್ತೆ, ಎಲ್ಲಿ ಎನ್ನುವುದರ ಬಗ್ಗೆ ತೀರ್ಮಾನ ಆಗಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಚರ್ಚೆ ನಡಿತಿದೆ ಆ ರೀತಿಯ ಸಂದರ್ಭ ಈಗಾ ಇಲ್ಲ. ಮಧ್ಯಂತರ ಚುನಾವಣೆ ಬರಲ್ಲ. ಮುಂದಿನ ನಾಲ್ಕು ವರ್ಷ ಸರ್ಕಾರ ಯಶಸ್ವಿಯಾಗಿ ಮುಂದುವರಿಯುತ್ತೆ ಅದರ ಬಗ್ಗೆ ಯಾವುದೇ ಅನುಮಾನ ಬೇಡ. ಸರ್ಕಾರದ ಬಗ್ಗೆ ಹಲವರು ಹಲವು ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಅದೆಲ್ಲವೂ ಅವರವರ ವೈಯುಕ್ತಿಕ ಅಭಿಪ್ರಾಯ. ವಿವಾದಾತ್ಮಕ ಹೇಳಿಕೆ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಅಂತ ನನಗೆ ಅನ್ನಿಸುತ್ತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ೩೦ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ರೂಪುಗೊಂಡಿದೆ. ರಾಜ್ಯದಲ್ಲಿ ಸುತ್ತೂರಿನಲ್ಲಿ ಬೃಹತ್ ಸೈನ್ಸ್ ಸಿಟಿ, ಮಂಗಳೂರು, ಧಾರವಾಡದಲ್ಲಿ ರಿಜನಲ್ ಸೈನ್ಸ್ ಸೆಂಟರ್ ಮಾಡಲಾಗುತ್ತಿದೆ. ಸುತ್ತೂರಿನಲ್ಲಿ ಆಗುತ್ತಿರುವ ಸೈನ್ಸ್ ಸಿಟಿ ದಕ್ಷಿಣ ಭಾರತದಲ್ಲೇ ಪ್ರಥಮ ಸೈನ್ಸ್ ಸಿಟಿಯಾಗಲಿದೆ. ಸೈನ್ಸ್ ಸಿಟಿಗಾಗಿ ಜೆಎಸ್ಎಸ್ ೨೫ ಎಕರೆ‌ ಭೂಮಿ‌ ಕೊಡಲು ಮುಂದೆ ಬಂದಿದೆ. ಇದರ ಸಂಪೂರ್ಣ ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು. ಸುಮಾರು ೨೦೦ ಕೋಟಿ ರೂ. ವೆಚ್ಚದಲ್ಲಿ ಸೈನ್ಸ್ ಸಿಟಿ‌ ನಿರ್ಮಾಣ ಮಾಡಲಾಗವುದು ಎಂದು ಡಾ.ಜಿ ಪರಮೇಶ್ವರ್ ತಿಳಿಸಿದರು.

Key words:  CM- gramvastavya- credit – not – JDS -DCM Dr.G. Parameshwar.