ಬೆಂಗಳೂರು,ಜೂ,4,2019(www.justkannada.in): ನೇಪಾಳದ ಕಠ್ಮಂಡುವಿನಲ್ಲಿ ನಡೆದ ರಾಷ್ಟ್ರೀಯ ಟಗ್ ಆಫ್ ವಾರ್ ಕ್ರೀಡಾಕೂಟದಲ್ಲಿ ಕರ್ನಾಟಕ ವನಿತೆಯರ ತಂಡ (480 kg ವಿಭಾಗದಲ್ಲಿ) ಬೆಳ್ಳಿ ಪದಕ ಪಡೆದು ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಅಭಿನಂದಿಸಿದರು. ವಿಶೇಷವಾಗಿ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿರುವುದು ನಾಡಿಗೆ ಹೆಮ್ಮೆಯ ಸಂಗತಿ ಎಂದು ಸಿಎಂ ಪ್ರಶಂಸೆ ವ್ಯಕ್ತಪಡಿಸಿದರು.
ಎಂಟು ಜನರ ತಂಡದಲ್ಲಿ ಬೆಂಗಳೂರು ಜೈನ್ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಎಸ್ ತಗಡೂರು, ಭಾಗ್ಯಲಕ್ಷ್ಮಿ ಬಾಲಾಜಿ, ಹಾಸನದ ಇಂಚರ, ಸರೇನಾ ಅನೀಸ್, ಗುಣರ್ಪಿತ, ಜಯಶ್ರೀ, ಬಿ.ಜಿ.ಆಶಾ, ಮರಿಯಾ ಜನೀಫರ್, ದೀಕ್ಷಾ ಭಾಗವಹಿಸಿದ್ದರು. ರೋಹಿತ್ ಅವರು ವನಿತೆಯರ ತಂಡಕ್ಕೆ ತರಬೇತಿ ನೀಡಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಕ್ರೀಡಾಪಟುಗಳನ್ನು ಅಭಿನಂದಿಸಿದರು.ಸಿಎಂ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಹಾಜರಿದ್ದರು. ನೇಪಾಳದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ನಾಡಿಗೆ ಹೆಮ್ಮೆ ತಂದಿರುವ ವನಿತೆಯರ ತಂಡವನ್ನು ದೇಶ ಮತ್ತು ರಾಜ್ಯದ ಟಗ್ ಆಫ್ ವಾರ್ ಸಂಸ್ಥೆಗಳು ಅಭಿನಂದಿಸಿವೆ.
Key words: CM HD Kumaraswamy congratulates to Karnataka women’s silver medal winner
#CMHDKumaraswamy #congratulates #silvermedal #winner