ಬೆಂಗಳೂರು,ಜೂ,7,2019(www.justkannada.in): ಕೊಡಗಿನಲ್ಲಿ 800 ಮರಗಳ ಹನನ ಸುದ್ದಿ ಹರಡಿದ ಬೆನ್ನಲ್ಲೆ ಮರ ಕಡಿತುವುದನ್ನು ನಿಲ್ಲಿಸಿ, ವರದಿ ನೀಡುವಂತೆ ಅರಣ್ಯಾಧಿಕಾರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಸಿಎಂ ಹೆಚ್. ಡಿ ಕುಮಾರಸ್ವಾಮಿ ಟ್ವಿಟರ್ ನಲ್ಲಿ ಈ ವಿಷಯವನ್ನ ಹಂಚಿಕೊಂಡಿದ್ದಾರೆ. ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡಲು ಬರೋಬ್ಬರಿ 800 ಮರಗಳನ್ನು ಕಡಿಯುವುದಕ್ಕೆ ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಮಡಿಕೇರಿ ತಾಲ್ಲೂಕಿನ ಕೆ ನಿಡುಗಣೆಯಲ್ಲಿ ಆಂಧ್ರ ಮೂಲದ ರೆಡ್ಡಿ 68 ಏಕರೆ ಜಾಗ ಖರೀದಿಸಿದ್ದರು.
ಬೃಹತ್ ಮರಗಳಿರುವ ಜಾಗದಲ್ಲಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ. ಹೀಗಾಗಿ ಆ 30 ಎಕರೆಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ಮಾಲೀಕ ಕೋರಿದ್ದ. ಅದಕ್ಕೆ ಕೊಡಗು ಜಿಲ್ಲಾಡಳಿತ ಕನ್ವರ್ಷನ್‍ಗೆ ಅವಕಾಶ ಕೊಟ್ಟಿತ್ತು. ಅಲ್ಲದೆ ಮಡಿಕೇರಿ ಡಿಎಫ್‍ಓ ಮರ ಕಡಿಯೋಕೆ ಅನುಮತಿ ಕೊಟ್ಟಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಜಾಗದ ಮಾಲೀಕ 890 ಮರಗಳ ಮಾರಣ ಹನನ ಮಾಡಿದ್ದರು.
ಸದ್ಯ ಮರ ಕಡಿದಿರುವ ಜಾಗದಲ್ಲಿ ರೆಸಾರ್ಟ್ ಗೆ ನಿರ್ಮಾಣಕ್ಕೆ ರೆಡ್ಡಿ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಬೆನ್ನೆಲೆಲ ಮರ ಕಡಿಯುವುದನ್ನು ನಿಲ್ಲಿಸುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆದೇಶ ನೀಡಿದ್ದಾರೆ.
Key words: CM HD Kumaraswamy instructed to stop tree cutting in kodagu.
#Kodagu #CMHDKumaraswamy #instructed #stop #treecutting