ಶಿವಮೊಗ್ಗ,ಜೂ,26,2019(www.justkannada.in): ಬಸ್ ತಡೆದು ಘೆರಾವ್ ಹಾಕಿದ್ದ ವೈಟಿಪಿಎಸ್ ಸಿಬ್ಬಂದಿ ಮೇಲೆ ಆಕ್ರೋಶ ಹೊರ ಹಾಕಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿರುವ ಕೆ.ಎಸ್ ಈಶ್ವರಪ್ಪ, ಜನರ ಬಳಿ ಸಿಎಂ ಹೆಚ್.ಡಿಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರೇ ಮೋದಿಗೆ ಯಾಕ್ ವೋಟ್ ಹಾಕ್ತಿರಾ ಅಂದ್ರೆ ಏನರ್ಥ. ಅವರ ಹೇಳಿಕೆಯಲ್ಲಿ ಅರ್ಥವಿಲ್ಲ. ಸಿಎಂ ಅವರ ಸರ್ವಾಧಿಕಾರಿ ಧೋರಣೆಯನ್ನ ಖಂಡಿಸುತ್ತೇವೆ. ನಿಖಿಲ್ ಸೋಲಿನ ಹತಾಶೆಯಿಂದ ಈ ರೀತಿ ಸಿಟ್ಟನ್ನ ಹೊರ ಹಾಕಿದ್ದಾರೆ. ಹೀಗಾಗಿ ಸಿಎಂ ಜನರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಪಕ್ಷ ಅಲ್ಲ. ಕಮಿಷನ್ ಏಜೇಂಟ್ ಗಳ ಸಂಘಟನೆ. ಸಚಿವ ಪರಮೇಶ್ವರ್ ನಾಯ್ಕ್ ಪರ್ಸೆಂಟೇಜ್ ಕೇಳಿದ್ದಾರೆ. ಹೀಗೆಂದು ಅವರ ಪಕ್ಷದ ಶಾಸಕರೇ ಹೇಳಿದ್ದಾರೆ. ರಾಜ್ಯದ ಸಚಿವರು ತಮಗೆ ಹೇಗೆ ಬೇಕೋ ಹಾಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನೀತಿ ನಿಯಮಗಳಿಲ್ಲ. ಅದೊಂದು ಸಂತೆ. ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ರನ್ನ ಸಚಿವ ಸ್ಥಾನದಲ್ಲಿ ಕಿತ್ತು ಹಾಕಲಿ ನೋಡೋಣ ಎಂದು ಸವಾಲು ಹಾಕಿದರು.
Key words: CM Hdk – apologize –to-people- KS Eshwarappa