ಸಿಎಂ ಹೆಚ್.ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಆಯ್ತು..ಈಗ ‘ಬಿಜೆಪಿಗೆ ವೋಟ್’  ವಿಚಾರದ ಬಗ್ಗೆ ಅಸಮಾಧಾನ ಹೊರ ಹಾಕಿದ ಡಿಸಿಎಂ ಪರಮೇಶ್ವರ್…

ಬೆಂಗಳೂರು,ಜೂ,28,2019(www.justkannada.in): ಮೊನ್ನೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬಸ್ ತಡೆದು ಪ್ರತಿಭಟಿಸಿದ್ದ ವೈಟಿಪಿಎಸ್ ಸಿಬ್ಬಂದಿ ವಿರುದ್ದ ಗರಂ ಆಗಿ, ವೋಟ್ ಹಾಕೋದು ಮೋದಿಗೆ ಕೆಲಸ ಮಾಡೋಕೆ ನಾವು ಬೇಕಾ ಎಂದಿದ್ದರು. ಇದಾದ ಬಳಿಕ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತ, ಕೆಲಸ ಮಾಡೋಕೆ ನಾವು ವೋಟ್ ಮಾತ್ರ ಬಿಜೆಪಿಗೆ ಹಾಕ್ತೀರಾ ಎಂದಿದ್ದರು. ಇದೀಗ ಡಿಸಿಎಂ ಪರಮೇಶ್ವರ್  ಬಿಜೆಪಿಗೆ ವೋಟ್ ವಿಚಾರವನ್ನ ಪ್ರಸ್ತಾಪಿಸಿ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನ ಆರ್. ಟಿನಗರದ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಸಾರ್ವಜನಿಕರ ಬಳಿ, ಬಿಜೆಪಿಗೆ ವೋಟ್ ಹಾಕಿದ್ದೀರಿ. ಪರವಾಗಿಲ್ಲ ಎಂದಿದ್ದಾರೆ.

ರಸ್ತೆ ಕಾಮಗಾರಿ ಬಗ್ಗೆ ಸಾರ್ವಜನಿಕರ ಬಳಿ ಚರ್ಚೆ ವೇಳೆ ಡಿಸಿಎಂ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದು, ಇಲ್ಲಿ ಯಾರ್ಯಾರು ನಮಗೆ ವೋಟ್ ಹಾಕಿದ್ದಾರೋ ಗೊತ್ತಿಲ್ಲ. ಕೆಲವರು ಕಾಂಗ್ರೆಸ್ ಗೆ ಕೆಲವರು ಬಿಜೆಪಿಗೆ ವೋಟ್ ಹಾಕಿದ್ದಾರೆ. ಬಿಜೆಪಿಗೆ ವೋಟ್ ಹಾಕಿದ್ರೂ ಪರವಾಗಿಲ್ಲ ಎಂದಿದ್ದಾರೆ.

ಲೋಕಸಭೆ ಸೋಲಿನಿಂದ ಬೇಸರಗೊಂಡಿರುವ ಸಮ್ಮಿಶ್ರ ಸರ್ಕಾರದ ನಾಯಕರು ಒಬ್ಬರ ನಂತರ ಒಬ್ಬರಂತೆ ಜನರ ಬಳಿ ತಮ್ಮ ಅಸಮಾಧಾನ ತೋರ್ಪಡಿಸುತ್ತಿದ್ದಾರೆ.

Key words:  CM-HDK former CM -Siddaramaiah -DCM Parameshwar-outraged -BJP- vote