ಬೆಂಗಳೂರು,ಫೆ,15,2020(www.juskannada.in): ನಾವು ರಾಮನ ವಿರೋಧಿಗಳಲ್ಲ. ನಾವು ಗಾಂಧಿಯ ರಾಮನ ಪರ. ಇದ್ದೇವೆ. ಅಂದ್ರೆ ಗೂಡ್ಸೆ ರಾಮನ ಪರ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ತಿಳಿಸಿದರು.
ಸಿಎಎ ಮತ್ತು ಎನ್ ಅರ್ ಸಿ ವಿರುದ್ದ ವಿವಿಧ ಸಂಘಟನೆಗಳಿಂದ ಟೌನ್ ಹಾಲ್ ಆವರಣದಲ್ಲಿ ಇಂದು ಬಹೃತ್ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ, ನಮಗ ಸ್ವಾತಂತ್ರ್ಯ ಸಿಕ್ಕ ನಂತರ ನಮಗೆ ಶಿಕ್ಷಣ ಇಲ್ಲ. ನಮ್ಮ ಸ್ಥಿತಿ ದಲಿತರಿಗಿಂತಲೂ ಕೀಳಾಗಿ ಇದೆ. ನಮಗೆ ಯಾವ ರೀತಿಯ ಅನ್ಯಾಯ ಆದ್ರು ನಾವು ಚಳುವಳಿ ಮಾಡಲಿಲ್ಲ. ವಿದ್ಯಾರ್ಥಿಗಳು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಮೋದಿ ಈ ಕಾನೂನು ತಂದದ್ದೇ ಹಿಂದೂ ಮುಸ್ಲಿಂ ಬೇರೆ ಮಾಡುವುದಕ್ಕೆ ಎಂದು ಆರೋಪಿಸಿದರು.
ಇ ವಿ ಎಂ ಮಿಷನ್ ಇರುವರೆಗೆ ಬಿಜೆಪಿಗೆ ಬಲ: ತಾಕತ್ ಇದ್ರೆ ಗಂಡಸ್ತನ ಇದ್ರೆ ಬ್ಯಾಲಿಟ್ ಪೇಪರ್ ತರಲಿ….
ದೆಹಲಿಯ ಜನ ಪ್ರಧಾನಿ ಮೋದಿಗೆ ಉತ್ತರ ನೀಡಿದ್ದಾರೆ. ಕ್ರೇಜಿವಾಲ್ ಅಮಿತ್ ಷಾ ಅನ್ನು ಪೊರಕೆಯಲ್ಲಿ ಗುಡಿಸು ಬಿಟ್ಟ. ಇವಿಎಂ ಮಿಷನ್ ಇರುವರೆಗೆ ಬಿಜೆಪಿಗೆ ಬಲ. ತಾಕತ್ ಇದ್ರೆ ಗಂಡಸ್ತನ ಇದ್ರೆ ಬ್ಯಾಲೆಟ್ ಪೇಪರ್ ತರಲಿ ಎಂದು ಸವಾಲು ಹಾಕಿದರು.
ಹಾಗೆಯೇ ಗೋ. ಮಧುಸೂದನ್ ಮಾತನಾಡ್ತಾನೆ. ಅವರವ್ವ ಅವನಿಗೆ ಮನುಷ್ಯನ ಹೆಸರು ಇಟ್ಟಿಲ್ಲ. ಅಂಬೇಡ್ಕರ್ ರವರನ್ನು ಗೆಲ್ಲಿಸಿದ್ದು ಮುಸ್ಲೀಮರು. ಶ್ರೀನಿವಾಸ್ ಪ್ರಸಾದ್ ರವರೇ ಸ್ವಲ್ಪ ಯೋಚನೆ ಮಾಡಿ. ದಲಿತರಿಗೆ ಅನ್ಯಾಯ ಆಗುತ್ತಿದೆ. ನೀವು ಅಂಬೇಡ್ಕರ್ ರವರ ಹೋರಾಟವನ್ನು ಹಿಂದಕ್ಕೆ ತೆಗೆದುಕೊಂಡು ಹೋಗ್ತಾ ಇದ್ದೀರಿ. ನಾವು ದೇಶವನ್ನು ಅಳುತ್ತಿದ್ದಾಗ ನಮ್ಮ ಹತ್ತಿರ ಬಿಜೆಪಿಯ ಜನ ಗುಮಾಸ್ತರಾಗಿದ್ರು ಎಂದು ಬಿಜೆಪಿ ನಾಯಕರ ವಿರುದ್ದ ಸಿಎಂ ಇಬ್ರಾಹಿಂ ಟೀಕಿಸಿದರು.
ನಾವು ಚುನಾವಣೆಯಲ್ಲಿ ಸೋತಿದ್ದು ನಮ್ಮ ತಪ್ಪಿನಿಂದ. ಕುದುರೆ ಮುಂದೆ ಕತ್ತೆಯನ್ನು ನಿಲ್ಲಿಸಿದ್ದೀವಿ. ನಮ್ಮ ಒಳ ಜಗಳದಿಂದ ಲೋಕಸಭೆ ಸೋತಿದ್ದೀವಿ. ಅದಕ್ಕಾಗಿ ಪ್ರತಾಪ್ ಸಿಂಹ ಗೆದ್ದಿದ್ದಾನೆ. ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಅವರ ಚಪ್ಪಲಿ ಬೀಡುವ ಜಾಗದಲ್ಲಿ ಇರುವ ಯೋಗ್ಯತೆ ಇಲ್ಲ. ಟಿಪ್ಪು ಮಕ್ಕಳನ್ನು ಗಿರಿವಿ ಇಟ್ಟ. ಆದರೆ ಮೋದಿ ದೇಶವನ್ನು ಗಿರಿವಿ ಇಡಲು ಹೋಗಿದ್ದಾನೆ ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
Key words: CM Ibrahim- not opponents – Rama- CAA – NRC Act -differentiate -Hindu Muslim.