ಮೈಸೂರು, ಸೆ.24,2024: (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50:50 ನಿವೇಶನ ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಾಸಿಕ್ಯೂಸನ್ ತೀರ್ಪಿಗೆ ಕ್ಷಣಗಣನೆ. ಇಂದು ಎಲ್ಲರ ಚಿತ್ತ ಹೈ ಕೋರ್ಟ್ ನತ್ತ.
ಅರ್ಜಿ ವಿಚಾರಣೆ ಅಂತ್ಯವಾದ ಹಿನ್ನಲೆ. ಇಂದು ಹೊರ ಬೀಳಲಿರುವ ತೀರ್ಪು. ರಾಜ್ಯಪಾಲರ ಪ್ರಾಸಿಕ್ಯೂಷನ್ ಎತ್ತಿ ಹಿಡಿದರೆ , ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬಿಗಿಯಾಗಲಿರುವ ಕಾನೂನಿನ ಕುಣಿಕೆ.
ರಾಜ್ಯಪಾಲರ ಪ್ರಾಸಿಕ್ಯೂಸನ್ ಕಾನೂನು ಬಾಹಿರ ಎಂದು ತೀರ್ಪ ಬಂದರೆ, ರಾಜಕೀಯವಾಗಿ ಹೆಚ್ಚಲಿರುವ ಸಿಎಂ ಸಿದ್ದರಾಮಯ್ಯ ಅವರ ನೈತಿಕ ಬಲ. ಎರಡು ಕಡೆಯ ವಾದ ಪ್ರತಿವಾದ ಆಲಿಸಿರುವ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ. ಇಂದು ಮಧ್ಯಾಹ್ನ 12 ಗಂಟೆಗೆ ತೀರ್ಪು ಹೊರ ಬೀಳುವ ಸಾಧ್ಯತೆ.
ರಾಜಕೀಯವಾಗಿ ರಾಡಿ ಎಬ್ಬಿಸಿರುವ ಮುಡಾ ಹಗರಣ. ಸಿಎಂ ಅವರ ಭವಿಷ್ಯ ಏನಾಗಲಿದೆ ಎಂಬ ಕುತೂಹಲದಲ್ಲಿ ಸಾರ್ವಜನಿಕರು. ಸಿಎಂ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಸೇರಿದಂತೆ ಹಲವು ವಕೀಲರಿಂದ ವಾದ ಮಂಡನೆ.
ದೂರದಾರರಾದ ಬೆಂಗಳೂರಿನ ಟಿ.ಜೆ ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ಪರ ವಕೀಲರಿಂದಲೂ ವಾದ ಮಂಡನೆ. ವಾದ ಪ್ರತಿವಾದಗಳ ಆಲಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಾಧೀಶರು.
ರಾಜ್ಯಪಾಲರ ಆದೇಶ ಎತ್ತಿ ಹಿಡಿದರೆ,ತಕ್ಷಣದಲ್ಲೇ ಸಿಎಂ ವಿರುದ್ಧ ಆಗಲಿದೆ ಎಫ್ಐಆರ್. ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡುವ ಸಾಧ್ಯತೆ. ಜತೆಗೆ ಕಾನೂನು ಹೋರಾಟ ಮುಂದುವರೆಸುವ ನಿಟ್ಟಿನಲ್ಲಿ ತಜ್ಞರ ಜತೆ ಸಮಾಲೋಚನೆಗೆ ಮುಂದಾಗುವ ಸಿದ್ದರಾಮಯ್ಯ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು.
ಒಂದು ವೇಳೆ ಸಿಎಂ ಪರ ಆದೇಶ ಹೊರ ಬಿದ್ದರೆ. ಬೀಸುವ ದೊಣ್ಣೆಯಿಂದ ಪಾರಾಗುವದರ ಜತೆಗೆ ರಾಜಕೀಯವಾಗಿ ಬಲಿಷ್ಠವಾಗಬಹುದು. ಸರ್ಕಾರಕ್ಕೂ ಹೆಚ್ಚಾಗಲಿದೆ ನೈತಿಕ ಶಕ್ತಿ.
ಮೈಸೂರಿನಲ್ಲಿ ಪೊಲೀಸ್ ಅಲರ್ಟ್ :
ಇಂದು ಸಿಎಂ ಪ್ರಾಸಿಕ್ಯೂಷನ್ ವಿಚಾರ ತೀರ್ಪು ಹಿನ್ನಲೆ. ಸಿಎಂ ತವರು ಮೈಸೂರಿನಲ್ಲಿ ಪೊಲೀಸ್ ಅಲರ್ಟ್. ಮೂಡಾ ಹಾಗೂ ಬಿಜೆಪಿ ಕಛೇರಿಗೆ ಭದ್ರತೆ. ಪರ – ವಿರೋಧ ಏನೆ ತೀರ್ಪು ಬಂದರು ಯಾವುದೆ ರೀತಿ ತೊಂದರೆ ಆಗದಂತೆ ಕ್ರಮ.
ನಗರದ ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ. ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಾಗ ನಗರದಲ್ಲಿ ನೆಡೆದಿದ್ದ ಧಿಡೀರ್ ಪ್ರತಿಭಟನೆಗಳು. ಮುಂಜಾಗ್ರತಾ ಕ್ರಮ ಇಲ್ಲದೆ ಪರದಾಡಿದ್ದ ಪೊಲೀಸರು. ಇಂದು ಮೊದಲೆ ಸಿಎಂ ತವರು ಮೈಸೂರಿನಲ್ಲಿ ಖಾಕಿ ಕಟ್ಟೆಚ್ಚರ.
key words: All eyes on, High Court, Police alert in, Mysuru, CM, MUDA, Prosecution
SUMMARY:
The countdown is for the prosecution’s verdict against Chief Minister Siddaramaiah in connection with the 50:50 plot allotment scam of the Mysuru Urban Development Authority (MUDA). Today, all eyes are on the High Court.