ಮುಡಾ ಹಗರಣದಲ್ಲಿ ಸಿಎಂ ಕೈವಾಡ: ಈಗಲೂ ಚುನಾವಣೆ ನಡೆದ್ರೆ ಬಿಜೆಪಿಗೆ 150 ಸ್ಥಾನ- ಬಿಎಸ್ ವೈ

ಬೆಂಗಳೂರು,ಜುಲೈ,4,2024 (www.justkannada.in): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ತೆರಿಗೆ ಹೆಚ್ಚಿಸಿ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಮುಡಾ ಹಗರಣದಲ್ಲಿ ಸಿಎಂ ಕೈವಾಡವಿದೆ.  ಮುಖ್ಯಮಂತ್ರಿಗಳೆ ತಾಕತ್ತಿದ್ದರೇ ವಿಧಾನಸಭೆ ವಿಸರ್ಜನೆ ಮಾಡಿ. ಈಗಲೂ ಸ್ಪರ್ಧಿಸಿದರೇ ಬಿಜೆಪಿಗೆ 150 ಸ್ಥಾನ ಬರುತ್ತೆ ಎಂದು ಸವಾಲೆಸೆದರು.

ಮುಂಬರುವ ಅಧಿವೇಶನದಲ್ಲಿ ಎಲ್ಲಾ ಹಗರಣ ಬಯಲು ಮಾಡುತ್ತೇವೆ. ಸಿಎಂ ಡಿಸಿಎಂಗೆ ಅಧಿಕಾರದಲ್ಲಿರುಲು ನೈತಿಕತೆ ಇಲ್ಲ. ಸದನದ ಹೊರಗೆ  ಒಳಗೆ  ನಾವು ಹೋರಾಟ ಮಾಡಬೇಕು. ಎಂಪಿ ಚುನಾವಣೆಯ್ಲಲಿ 19 ಕ್ಷೇತ್ರ ಬಿಜೆಪಿ- ಜೆಡಿಎಸ್ ಗೆದ್ದಿದೆ. 145 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದೇವೆ.  ಈಗ ಚುನಾವಣೆ ನಡೆದ್ರೂ 150 ಸ್ಥಾನ ಗೆಲ್ಲುತ್ತೇವೆ . 17 ಸಚಿವರ  ಕ್ಷೇತ್ರದಲ್ಲಿ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವ ನೈತಿಕತೆ ಕಳೆದುಕೊಂಡಿದೆ ಜನರು ಕಾಂಗ್ರೆಸ್ ನ ಭ್ರಷ್ಟಾಚಾರದ ವಿರುದ್ದ ಮತ ಹಾಕಿದ್ದಾರೆ.  ಕಾಂಗ್ರೆಸ್ ದಿವಾಳಿತನದಿಂದ ಶಾಸಕರ ಅನುದಾನಕ್ಕೆ ಕತ್ತರಿ ಬಿದ್ದಿದೆ.  ಕೈ ಶಾಸಕರೇ ಗ್ಯಾರಂಟಿ ನಿಲ್ಲಿಸಿ ಅನುದಾನ ನೀಡಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words:  CM, Muda, scam, BS Yeddyurappa