ಮೈಸೂರು,ಸೆಪ್ಟಂಬರ್,30,2024 (www.justkannada.in): ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ನಾಯಕರ ಆಗ್ರಹಿಸಿರುವ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಹೆಚ್.ಸಿ ಮಹದೇವಪ್ಪ, ಮುಡಾ ಪ್ರಕರಣದಲ್ಲಿ ಸಿಎಂ ಕುಗ್ಗಿಲ್ಲ. ಎಫ್ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಇಡೀ ದೇಶದಲ್ಲಿ ಅನೇಕ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ಆಗಿದೆ. ಎಫ್ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕಾಗಿಲ್ಲ. ಜೈಲಿಗೆ ಹೋದ ತಕ್ಷಣ ರಾಜೀನಾಮೆ ನೀಡು ಅಂತ ಕೋರ್ಟ್ ಹೇಳಿದ್ಯಾ..? ಎಂದು ಪ್ರಶ್ನಿಸಿದರು.
ಭಾರತೀಯ ಇತಿಹಾಸದಲ್ಲಿ ಚುನಾವಣೆ ಬಾಂಡ್ ಮೂಲಕ ಹಣ ಪಡೆದಿರೋದು ಅತಿ ದೊಡ್ಡ ಸ್ಕ್ಯಾಮ್. ಐಟಿ ದಾಳಿಗೆ ಒಳಗಾಗಿದ್ದ ವ್ಯಕ್ತಿಗಳೇ 8 ಸಾವಿರ ಕೋಟಿ ಹಣವನ್ನ ಚುನಾವಣೆ ಬಾಂಡ್ ಮೂಲಕ ನೀಡಿದ್ದಾರೆ. ಚುನಾವಣೆ ಬಾಂಡ್ ಮೂಲಕ ನೀಡಲಾಗುತ್ತಿದ್ದ ಹಣದ ಮಾಹಿತಿಯನ್ನ ಸೀಕ್ರೆಟ್ ಆಗಿಡಲು ಮುಂದಾಗಿದ್ದೇ ಬಿಜೆಪಿ ನಾಯಕರು. ಮುಡಾ ಪ್ರಕರಣದಲ್ಲಿ ಸಿಎಂ ಕುಗ್ಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಕಡೆ ಸಾಗುತ್ತಿದೆ ಎಂಬ ಬೇಸರ ಇದೆ. ನೈತಿಕತೆ ಇಟ್ಟುಕೊಂಡಿರುವ ವ್ಯಕ್ತಿಗಳು ಪ್ರಸ್ತುತ ರಾಜಕೀಯದಲ್ಲಿ ಇಲ್ಲ. ಬಿಜೆಪಿಯಲ್ಲಿ ಸಿಎಂ ಆಗಲಿಕ್ಕೆ 3ಸಾವಿರ ಕೋಟಿ ಕೊಡಬೇಕು. ಇದನ್ನೇ ಯತ್ನಾಳ್ ರವರು ಹೇಳುತ್ತಿರೋದು. ರಾಜ್ಯಪಾಲರ ನಿಲುವುಗಳ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ನಾವು ಅದನ್ನೆಲ್ಲ ಗಮನಿಸಬೇಕು ಎಂದರು.
ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ.
ಸಿಎಂ ಸ್ಥಾನ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ ಮಹದೇವಪ್ಪ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವವರಿಗೆ ಸಿದ್ದರಾಮಯ್ಯ ಪೆಡಂಭೂತ ರೀತಿ ಕಾಡುತ್ತಿದ್ದಾರೆ. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಬಹುಮತ ಪಡೆದು ಸಿಎಂ ಆಗಿರೋದು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದವಾಗಿರುತ್ತೇವೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಎಲ್ಲಾ ಸಂದರ್ಭದಲ್ಲಿಯೂ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಎಲ್ಲಾ ಪಕ್ಷದಲ್ಲೂ ಇದೆ ಇರೋದು ಎಂದರು.
Key words: CM, not, depressed, Muda case, Minister, HC Mahadevappa