ನಾಳೆಯಿಂದ ನಾನು ಕಾವಿ ಬಟ್ಟೆ ಹಾಕ್ತಿನಿ, ಅವರ ಸ್ಥಾನ ಬಿಟ್ಟುಕೊಡ್ತಾರಾ..? ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು,ಜೂನ್,27,2024 (www.justkannada.in): ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿಎಂ ಸಿದ್ದರಾಮಯ್ಯಗೆ ಕೆಂಪೇಗೌಡ ಜಯಂತಿ ವೇದಿಕೆಯಲ್ಲೇ ಮನವಿ ಮಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಮಠದ ಚಂದ್ರಶೇಖರ ಸ್ವಾಮೀಜಿಗೆ  ಸಹಕಾರ ಸಚಿವ ಕೆ.ಎನ್ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.

ನಾಳೆಯಿಂದ ನಾನು ಕಾವಿ ಬಟ್ಟೆ ಹಾಕ್ತಿನಿ, ಅವರ ಸ್ಥಾನ ಬಿಟ್ಟುಕೊಡ್ತಾರಾ..? ಎಂದು ಸಚಿವ ಕೆ.ಎನ್ ರಾಜಣ್ಣ ಲೇವಡಿ ಮಾಡಿದ್ದಾರೆ. ಈ ಕುರಿತು ಮಾತನಾಡಿ,  ಸ್ವಾಮೀಜಿಗಳು ಸ್ಥಾನ ಬಿಟ್ಟುಕೊಡಲಿ ನಾನು ಸ್ವಾಮಿ ಆಗ್ತೀನಿ. ಸ್ವಾಮೀಜಿ ಸ್ಥಾನ ಬಿಟ್ಟುಕೊಡ್ತಾರಾ..?  ಸಿಎಂ ಸ್ಥಾನ ಯಾರು ಬಿಟ್ಟು ಕೊಡಲು ಹೋಗ್ತಾರೆ..?  ಅವರು ಬಿಟ್ಟುಕೊಡಲ್ಲ ಇವರೂ ಬಿಟ್ಟುಕೊಡಲ್ಲ. ಸುಮ್ಮನೇ ಏನೋ ಹೇಳಿದ್ರೆ ಆಗಲ್ಲ ಎಂದರು.

ನಾನು ಡಿಸಿಎಂ ಹುದ್ದೆ ಆಕಾಂಕ್ಷಿಯಲ್ಲ. ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ  ಸ್ಥಾನ ನಿಭಾಯಿಸುವೆ ಎಂದು ಕೆ.ಎನ್ ರಾಜಣ್ಣ ಹೇಳಿದರು.

Key words: CM Position, DK Shivakumar, KN Rajanna