ಬೆಂಗಳೂರು,ನವೆಂಬರ್,24,2021(www.justkannada.in): ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆ ಕೊಂಚ ಬಿಡುವು ನೀಡಿದ್ದು ವರುಣನ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನ ಪ್ರದೇಶಗಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವನ್ನೇ ಸೃಷ್ಠಿಸಿದೆ.
ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ನಗರದ ಮಳೆಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಂತೆಯೇ ಇಂದು ಸಹ ಸಿಎಂ ಬೊಮ್ಮಾಯಿ ಮಳೆಹಾನಿ ಪ್ರದೇಶಗಳಲ್ಲಿ ರೌಂಡ್ಸ್ ಮುಂದುವರೆಸಿದ್ದಾರೆ. ಇಂದು ರಾಜಕಾಲುವೆ ಪರಿಶೀಲನೆ ನಡೆಸಿದ್ದಾರೆ.
ಹೆಣ್ಣೂರು ಬಂಡೆಯ ವಡ್ಡರಪಾಳ್ಯದಲ್ಲಿ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು. ಸಿಎಂಗೆ ಸಚಿವ ಭೈರತಿ ಬಸವರಾಜ್ ಸಾಥ್ ನೀಡಿದರು. ರಾಜಕಾಲುವೆ ಒತ್ತುವರಿ, ಅತಿಕ್ರಮಣದಿಂದಾಗಿ ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಶೀಗ್ರ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Key words: CM Rounds – rainy areas – Bangalore-CM- Basavaraj Bommai
ENGLISH SUMMARY….
CM rounds in rain-hit areas in Bengaluru: Inspects storm water drains
Bengaluru, November 24, 2021 (www.justkannada.in): The heavy downpour, which had caused a lot of trouble in the capital city Bengaluru has given a break, at last, bringing a sigh of relief among the citizens. However, several low-lying areas have been inundated in rainwater. Rainwater also has entered several houses, causing havoc.
Chief Minister Basavaraj Bommai is visiting the rain-hit areas in the City from yesterday and inspecting. Today the CM also inspected a stormwater drain at the Vaddarapalya in Hennurbande. He was accompanied by Minister Byrathi Basavaraj. It is alleged that the rainwater has entered several apartment complexes, which have been illegally constructed, encroaching the stormwater drains. The Chief Minister assured of initiating action soon to remove all the illegal encroachments.
Keywords: Chief Minister Basavaraj Bommai/ visit/ rain-hit areas/ inspect