ಕೇಂದ್ರದ ಹಿಂದಿ ಹೇರಿಕೆಗೆ ನಾವು ಒಪ್ಪಲ್ಲ, ವಿರೋಧಿಸುತ್ತೇವೆ- ಸಿಎಂ ಸಿದ್ದರಾಮಯ್ಯ

ಮಂಡ್ಯ,ಏಪ್ರಿಲ್,22,2025 (www.justkannada.in): ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ನಾವು ಒಪ್ಪಲ್ಲ . ಕೇಂದ್ರದ ನಡೆಯನ್ನ ನಾವು ವಿರೋಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಂಡ್ಯದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ಬಿಡಲ್ಲ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಲ್ಲಿದೆ. ಮಾತೃಭಾಷೆ  ಮತ್ತು ಇಂಗ್ಲೀಷ್ ಕಲಿಯುವ ಅವಕಾಶವಿದೆ ತ್ರಿಭಾಷಾ ಸೂತ್ರ ಇಲ್ಲ. ರಾಜ್ಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾತ್ರ ಕಲಿಸುತ್ತೇವೆ ಎಂದು ತಿಳಿಸಿದರು.

ವಿಂಗ್ ಕಮಾಂಡರ್ ನಿಂದ ಬೈಕ್ ಸವಾರನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ.  ಇಬ್ಬರೂ ದೂರು ದಾಖಲಿಸಿದ್ದಾರೆ ತನಿಖೆ ಆಗುತ್ತದೆ. ವಿಂಗ್ ಕಮಾಂಡರ್ ಆಗಲಿ, ಯಾರೇ ಆಗಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: imposition, Hindi, oppose, CM Siddaramaiah