ಮೈಸೂರು, ಏ.೨೬,೨೦೨೫: ಕಾಶ್ಮೀರದಲ್ಲಿನ ಉಗ್ರರ ದಾಳಿಗೆ ೨೬ ಮಂದಿ ಪ್ರವಾಸಿಗರು ಮೃತಪಟ್ಟ ಘೋರ ಘಟನೆ ನಡೆದಿದ್ದರು, ಪ್ರಧಾನಿ ನರೇಂದ್ರ ಮೋದಿ ಬಿಹಾರ ಚುನಾವಣೆ ಪ್ರಚಾರಕ್ಕೆ ತೆರಳಿದ್ದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದರು.
ಮೈಸೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಹೇಳಿದಿಷ್ಟು…
ಉಗ್ರರ ದಾಳಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸರ್ವ ಪಕ್ಷ ಸಭೆಗೆ ಪ್ರಧಾನಿ ಹೋಗದ ವಿಚಾರ ಪ್ರಸ್ತಾಪಿಸಿ ಅಸಮಧಾನ ವ್ಯಕ್ತಪಡಿಸಿದರು. ಇಂತಹ ಗಂಭೀರ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ.? ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ, ಸಭೆ ಮುಖ್ಯಾನಾ. ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದ್ಯಾ? ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ಬಿಹಾರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಟುವಾಗಿ ಖಂಡಿಸಿದರು.
ಪಾಕ್ ಪ್ರಜೆ:
ರಾಜ್ಯದಲ್ಲಿನ ಪಾಕ್ ಪ್ರಜೆಗಳನ್ನು ಹೊರ ಹಾಕಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ವಿಚಾರ ಪ್ರಸ್ತಾಪಿಸಿ, ರಾಜ್ಯದಲ್ಲಿ ಎಷ್ಟು ಜನ ಇದ್ದಾರೆ ಮಾಹಿತಿ ತೆಗೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಡುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸಹಕಾರ ಇದೇ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ನನ್ನ ಆರೋಗ್ಯ 90% ಸುಧಾರಿಸಿದೆ :
ಈಗ ನಾನು ಆರೋಗ್ಯವಾಗಿದ್ದೇನೆ. ಕಾಲು ನೋವು ಮೊದಲಿನಷ್ಟು ಇಲ್ಲ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಹೋಗತ್ತೆ ಎಂಬ ಮೌಡ್ಯ ವಿಚಾರ, ಮೊದಲ ಬಾರಿ ಹೋದಾಗಲೇ ಆ ಮೌಡ್ಯ ತೊಡೆದು ಹೋಯ್ತು. ಈಗಾಗಲೇ 20 ಬಾರಿ ಹೋಗಿದ್ದೇನೆ. ಅಲ್ಲಿಗೆ ಹೋದಮೇಲೆ ನನ್ನ ಸ್ಥಾನ ಗಟ್ಟಿ ಆಯ್ತು. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
key words: Bihar election campaign, PM Modi, all-party meeting, CM Siddaramaiah,
SUMMARY:
Is Bihar election campaign more important for PM Modi than all-party meeting? : Siddaramaiah. Chief Minister Siddaramaiah condemned Prime Minister Narendra Modi’s visit to Bihar election campaign,