ಬೆಂಗಳೂರು,ಜನವರಿ,3,2024 (www.justkannada.in): ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಖ್ಯಾತ ಪ್ರವಾಸಿ ತಾಣಗಳ ಛಾಯಾಚಿತ್ರಗಳನ್ನ ಅಳವಡಿಕೆ ಮಾಡಲಾಗಿದ್ದು ಸಿಎಂ ಸಿದ್ದರಾಮಯ್ಯ ಅವುಗಳನ್ನ ಅನಾವರಣಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರವಾಸೋದ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ವಿಧಾನಸೌಧದ ಕ್ಯಾಬಿನೆಟ್ ಹಾಲ್ ಮುಂಭಾಗ ಕಳೆದ ವರ್ಷ ಯುನೆಸ್ಕೋ ಪಟ್ಟಿಗೆ ಸೇರಿದ ಚೆನ್ನಕೇಶವ ದೇವಾಲಯ, ಸೋಮನಾಥಪುರ ಹಾಗೂ ವಿಷ್ಣು ಮೂರ್ತಿ, ಗುಹಾಂತರ ದೇವಾಲಯ ಬಾದಾಮಿಯ ಛಾಯಾಚಿತ್ರಗಳನ್ನು ಅನಾವರಣಗೊಳಿಸಿದರು.
ವಿಧಾನಸೌಧದಲ್ಲಿ ವಿಜಯಪುರದ ಗೋಲಗುಮ್ಮಟ, ವೀರನಾರಾಯಣ ದೇವಾಲಯ, ಗದಗ, ಪಟ್ಟದಕಲ್ಲು, ಹಂಪಿ, ಮೈಸೂರು ದಸರಾ, ಮೈಸೂರು ಅರಮನೆಯ ದರ್ಬಾರ್ ಹಾಲ್, ಜೋಗ ಜಲಪಾತ, ಕಬಿನಿ, ಯಕ್ಷಗಾನ, ಕಂಬಳ ಮತ್ತು ಕರ್ನಾಟಕ ರಾಜ್ಯದ Geographical Indication (G I) ಉತ್ಪನ್ನಗಳ ಛಾಯಾಚಿತ್ರಗಳನ್ನು ಅಳವಡಿಸಲಾಗುತ್ತಿದೆ.
ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡಗಳ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ನಮ್ಮ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳು, ಶಿಲ್ಪಕಲೆ, ಪಾಕಶೈಲಿ ಮತ್ತು ಸಂಸ್ಕೃತಿಯನ್ನು ಪ್ರಚಾರಪಡಿಸುವ ಹಿತದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖಾ ವತಿಯಿಂದ ಛಾಯಾಚಿತ್ರಗಳನ್ನು ಅಳವಡಿಸಲಾಗುತ್ತಿದೆ.
Key words: Tourist photos, highlight, beauty, Vidhana soudha, CM Siddaramaiah