ಬೆಂಗಳೂರು,ಜನವರಿ,14,2025 (www.justkannada.in): ಇಂದು ನಾಡಿನೆಲ್ಲಡೆ ಸಂಕ್ರಾಂತಿ ಹಬ್ಬದ ಸಂಭ್ರಮವಾಗಿದ್ದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿಯು ಸರ್ವರ ಕಷ್ಟಗಳನ್ನು ಕಳೆದು, ಸುಖ, ಶಾಂತಿ, ಸಮೃದ್ಧಿಯ ಹೊಸ ದಿಕ್ಕಿನೆಡೆಗೆ ಮುನ್ನಡೆಸಲಿ ಎಂದು ಆಶಿಸುತ್ತೇನೆ.
ಎಳ್ಳು- ಬೆಲ್ಲದ ಜೊತೆ ಪ್ರೀತಿ, ಬಾಂಧವ್ಯ ಮಿಳಿತಗೊಳ್ಳಲಿ, ನಾಡಿನಲ್ಲಿ ಸ್ನೇಹ, ಸೌಹಾರ್ದತೆ ಶಾಶ್ವತವಾಗಿ ಮನೆಮಾಡಲಿ. ನಾಡಬಂಧುಗಳಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.
Key words: CM Siddaramaiah, wishes, Sankranti festival