ಗಾಂಧಿ ತತ್ವ ಪುನರ್ ಸ್ಥಾಪಿಸುವ ಉದ್ದೇಶದಿಂದ ಸಮಾವೇಶ- ಸಿಎಂ ಸಿದ್ದರಾಮಯ್ಯ

ಬೆಳಗಾವಿ,ಜನವರಿ,21,2025 (www.justkannada.in): ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಸಮಾವೇಶ ಆಯೋಜನೆ ಮಾಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಸಮಾವೇಶ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಮಹಾತ್ಮ ಗಾಂಧಿ ತತ್ವಗಳನ್ನ ಪುನರ್ ಸ್ಥಾಪಿಸುವ ಉದ್ದೇಶದಿಂದ ಸಮಾವೇಶ ಆಯೋಜನೆ ಮಾಡಲಾಗಿದೆ.   ಗಾಂಧಿ, ಬಸವಣ್ಣ, ಡಾ.ಬಿಆರ್ ಅಂಬೇಡ್ಕರ್,  ಕನಕದಾಸರ ತತ್ವ ಪಾಲಿಸೇಕು.  ಸಂವಿಧಾನವನ್ನ ವಿರೋಧಿಸುವ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಗಾಂಧಿ ತತ್ವ,ಆದರ್ಶಗಳನ್ನ ಪುನರ್ ಸ್ಥಾಪಿಸಬೇಕಿದೆ. ಅದ್ದರಿಂದ ಇಂತಹ ಸಮಾವೇಶಗಳನ್ನ ಆಯೋಜನೆ ಮಾಡಲಾಗುತ್ತಿದೆ ಎಂದರು.

Key words: Belgaum, congress, re-establish, Gandhian principles, CM Siddaramaiah