ಮೈಸೂರು,ಜನವರಿ,31,2025 (www.justkannada.in): ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದರೂ ಏನು ಕೊಡಲ್ಲ. ಹೀಗಾಗಿ ಕೇಂದ್ರ ಬಜೆಟ್ ಬಗ್ಗೆ ಯಾವ ನಿರೀಕ್ಷೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಜೆಟ್ ಬಗ್ಗೆ ನಾನು ಏನು ನಿರೀಕ್ಷೆ ಮಾಡಲ್ಲ. ಬಜೆಟ್ ನಲ್ಲಿ ಘೋಷಣೆ ಮಾಡಿದರೂ ಕೊಡಲ್ಲ. ಈ ಹಿಂದೆ ಕೃಷ್ಣ ಮೇಲ್ದಂಡೆ ಯೋಜನೆಗೆ ಹಣ ಕೊಡುತ್ತೇವೆ ಅಂತ ಹೇಳಿದರು. ಕೊಡಲಿಲ್ಲ ಅದಕ್ಕೆ ಕೇಂದ್ರ ಬಜೆಟ್ ನಿಂದ ಏನು ನಿರೀಕ್ಷೆ ಮಾಡಲ್ಲ. ನಮ್ಮ ತೆರಿಗೆ ಹಣವನ್ನೇ ನಮಗೆ ಸರಿಯಾಗಿ ಕೊಡುತ್ತಿಲ್ಲ ರಾಜ್ಯಕ್ಕೆ ತೆರಿಗೆ ಅನ್ಯಾಯ ಆಗಿದಿಯಾ ಇಲ್ವಾ ನೀವು ಮಾಧ್ಯಮದವರು ಹೇಳಿ ಎಂದು ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್ ಕಿರುಕುಳ: ಸುಗ್ರೀವಾಜ್ಞೆ ಆಗಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕ್ರಮ ಕೈಗೊಳ್ಳುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜನ ಎಲ್ಲಿ ಸಾಲ ಸಿಗತ್ತೆ ಅಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಫೈನಾನ್ಸ್ ಅವರು ಬಡ್ಡಿ ಜಾಸ್ತಿ ಹಾಕುತ್ತಾರೆ. ವಸೂಲಿ ಮಾಡುವಾಗ ಹಿಂಸೆ ಕೊಡುತ್ತಾರೆ. ಬೇರೆ ಗೂಂಡಾ ರೌಡಿಗಳನ್ನು ಬಿಟ್ಟು ವಸೂಲಿ ಮಾಡ್ತಿದ್ದಾರೆ. ಆರ್. ಬಿ.ಐ ಕೇಂದ್ರ ಸರ್ಕಾರದಲ್ಲಿದೆ. ಮೈಕ್ರೋ ಫೈನಾನ್ಸ್ ಕೂಡ ಕೇಂದ್ರ ಸರ್ಕಾರದ ಅಡಿಯಲ್ಲಿ ಬರತ್ತೆ ಈಗ ಸುಗ್ರೀವಾಜ್ಞೆ ಆಗಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನಾನು ಜನರಲ್ಲಿ ಮನವಿ ಮಾಡುತ್ತೇವೆ. ಯಾರು ಕೂಡ ಅತ್ಮಹತ್ಯೆ ಮಾಡಿಕೊಳ್ಳಬೇಡಿ.ಯಾವುದೇ ರೀತಿಯ ನಿರ್ಧಾರ ಮಾಡಬೇಡಿ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತೆ ಎಂದರು.
ನಿನ್ನೆ ಸಚಿವರಾದ ಸತೀಶ್ ಜಾರಕಿಹೊಳಿ , ಪರಮೇಶ್ವರ್ ಮೀಟಿಂಗ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಊಟ ಮಾಡಿದರೆ ಮೀಟಿಂಗ್ ಮಾಡಿದರೆ ಅದು ತಪ್ಪಲ್ಲ. ಅದರಲ್ಲಿ ಊಹೆ ಮಾಡೋದಕ್ಕೆ ಏನಿಲ್ಲ ಎಂದರು.
ಕುಂಭ ಮೇಳದ ಬಗ್ಗೆ ಮಾತನಾಡೋರು ಅಯೋಗ್ಯರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವರ ಪಾರ್ಟಿಯಲ್ಲಿ ಅವರು ಸರಿಯಿಲ್ಲ ಅಂತಿದ್ದಾರೆ. ನಾನೇನು ಹೇಳಲಿ. ವಿಜಯೇಂದ್ರರದ್ದು ಬಾಲಿಶ ಹೇಳಿಕೆ ಎಂದರು.
ಇಡಿ ಸೈಟ್ ಸಿಜ್ ವಿಚಾರ, ಇದೊಂದು ಪೊಲಿಟಿಕಲ್ ಗಿಮಿಕ್. ಹಣದ ಅವ್ಯವಹಾರ ಆಗಿದೆ ಅನ್ನೋಕೆ ಸಾಕ್ಷಿ ಎಲ್ಲಿದೆ . ನಟೇಶ್ ಹೈ ಕೋರ್ಟ್ ಗೆ ಹೋಗಿದ್ದಾರೆ. ಅವರ ಪೆಟಿಷನ್ ಒಪ್ಪಿಗೆಯಾಗಿದೆ. ಅದು ಮನಿ ಲ್ಯಾಂಡರಿಂಗ್ ಆಗಿಲ್ಲ ಅಂತ ಕೋರ್ಟ್ ಹೇಳಿದೆ. ಮುಡಾ ಕೇಸ್ ನಲ್ಲಿ ತಾನೇ ಹೇಳಿರೋದು . ಇಡಿ ನೋಟಿಸ್ ಕೊಟ್ಟು ಕರೆದಿರುವುದು ತಪ್ಪು ಅಂತ ಕೋರ್ಟ್ ಗೆ ಹೋಗಿದ್ದಾರೆ . ನಟೇಶ್ ಹೇಳಿದ್ದಾರೆ. ಕೋರ್ಟ್ ಕೂಡ ನಟೇಶ್ ಹೇಳಿದ್ದು ಸರಿ ಅಂತಿದೆ. ಉದ್ದೇಶ ಪೂರ್ವಕವಾಗಿ ಇಡಿಯಿಂದ ರಾಜಕೀಯ ಮಾಡಿಸುತ್ತಿದ್ದಾರೆ ಎಂದುವಿಪಕ್ಷಗಳ ಮೇಲೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಪೂರ್ಣಾವಧಿ ಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹೈ ಕಮಾಂಡ್ ತೀರ್ಮಾನ ಅಂತಿಮ. ನನ್ನ ನಿರ್ಧಾರ ಏನಿಲ್ಲ ಎಂದರು.
Key words: no expectations, Union Budget, CM, Siddaramaiah