ಬೆಂಗಳೂರು,ಮಾರ್ಚ್,17,2025 (www.justkannada.in): ಆರ್ ಎಸ್.ಎಸ್ ಅನ್ನು ಎದುರಿಸಲು ನಾವು ಸಿದ್ಧ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಆರ್ ಎಸ್.ಎಸ್ ಹೇಳಿದಂತೆ ಮಾಡುತ್ತೆ. ಆರ್ ಎಸ್ .ಎಸ್ ನವರಿಗೆ ನಾವು ಹೆದರುವುದಿಲ್ಲ. ಅವರನ್ನು ಎದುರಿಸಲು ನಾವು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷದವರಿಗೆ ಹೇಳಿದರು.
ದಲಿತರ, ಹಿಂದುಳಿದವರ ಏಳಿಗೆ ಸಹಿಸದ ಬಿಜೆಪಿಗೆ ದಲಿತರು ದಲಿತರ ಕಾಲೋನಿಯಲ್ಲೇ ಇರಬೇಕು ಎನ್ನುವ ದುರುದ್ದೇಶವಿದೆ. 1942 ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು ನೀವು. ನೀವು ಬ್ರಿಟಿಷರ ಏಜೆಂಟರು ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
Key words: We, ready, face, RSS, CM Siddaramaiah