ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ತನಿಖೆ ಎದುರಿಸೋದು ಒಂದು ಡ್ರಾಮಾ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ,ನವೆಂಬರ್,5,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿರುವ ವಿಚಾರ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ತನಿಖೆ ಎದುರಿಸೋದು ಒಂದು ಡ್ರಾಮ . ಪ್ರಕರಣ ಸಿಬಿಐಗೆ ಹೋಗಬಾರದೆಂದು ಡ್ರಾಮಾ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಎಸ್ ಐಟಿ ಅಂದರೆ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಅಲ್ಲ. ಸೇವ್ ಸಿದ್ದರಾಮಯ್ಯ ಸಚಿವರ  ಇನ್ವೆಸ್ಟಿಗೇಷನ್ ಟೀಮ್ . ಲೋಕಾಯುಕ್ತದಲ್ಲಿ ತಮ್ಮ ಚೇಲಾಗಳನ್ನ ಕೂರಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು.

Key words: CM Siddaramaiah, Lokayukta, probe, drama, Prahlad Joshi