ಮೈಸೂರು, ಅಕ್ಟೋಬರ್,3,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ವಾಪಸ್ ನೀಡಿದ್ದ 14 ಸೈಟ್ ಗಳು ಇಂದು ಅಧಿಕೃತವಾಗಿ ಮುಡಾ ಸುಪರ್ದಿಗೆ ಸೇರಿವೆ.
ಸಿಎಂ ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾದ ನಂತರ ಮುಡಾಗೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೂರು ದಿನಗಳ ಹಿಂದೆ 14 ಸೈಟ್ ಗಳನ್ನು ವಾಪಸ್ಸು ನೀಡಿದ್ದರು. ಆ ಸೈಟ್ ಗಳು ಈಗ ಅಧಿಕೃತವಾಗಿ ಇಂದು ಮುಡಾ ತೆಕ್ಕೆಗೆ ಬಂದಿವೆ. ಇದೀಗ ಸಂಪೂರ್ಣ ನೋಂದಣಿ ಕಾರ್ಯ ಮುಕ್ತಾಯವಾಗಿದೆ.
ಈ ಸಂಬಂಧ 1-10-2024 ರಂದು ಖಾಸಗಿ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗತ್ತು. 3-10-2024( ಇಂದು) ರಂದು 14 ನಿವೇಶನಗಳು ಕ್ಯಾನ್ಸಲ್ ಆಗಿದ್ದು, ಕ್ಯಾನ್ಸಲೇಷನ್ ಡೀಡ್ ಮುಖಾಂತರ ಪ್ರತಿ ನಿವೇಶನಕ್ಕೆ 1000 ರೂ ಗಳ ಕನ್ಸಡ್ರೇಷನ್ ಮೊತ್ತ ತೋರಿಸಿ ರದ್ದು ಮಾಡಲಾಗಿದೆ. 14 ಸೈಟ್ ಗಳು ಮುಡಾ ಕಾರ್ಯದರ್ಶಿ ಹೆಸರಿಗೆ ನೋಂದಣಿಯಾಗಿವೆ.
ಸಿಎಂ ಪತ್ನಿ ಪಾರ್ವತಿಯಿಂದ ಮುಡಾ ಸೆಕ್ರೆಟರಿ ಹೆಸರಿಗೆ ನೋಂದಣಿ ನೋಂದಾಯಿಸಿಕೊಡಲಾಗಿದಡ. ಮುಡಾಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಶಾರದಾದೇವಿ ನಗರ ನಿವಾಸದಲ್ಲಿ ಮೊನ್ನೆ ಖಾಸಗಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಫೋಟೋ ಹಾಗೂ ದಾಖಲೆಗಳನ್ನ ಪಡೆದುಕೊಳ್ಳಲಾಗಿತ್ತು.
Key words: CM Siddaramaiah, wife, 14 sites, officially, MUDA