ಮೈಸೂರು,ಮಾರ್ಚ್,25,2024(www.justkannada.in): ಮೈಸೂರು–ಕೊಡಗು ಮತ್ತು ಚಾಮರಾಜನಗರ ಲೋಕಸಭೆ ಕ್ಷೇತ್ರವನ್ನ ಗೆಲ್ಲಲು ಹಠಕ್ಕೆ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಇಂದು ವಿಶ್ರಾಂತಿ ನೆಪದಲ್ಲಿ ಭರ್ಜರಿ ಮೀಟಿಂಗ್ ನಡೆಸಿದ್ದಾರೆ.
ಅದರಲ್ಲೂ ಈ ಬಾರಿ ಮೈಸೂರು ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ನಾಗರಹೊಳೆ ರೆಸಾರ್ಟ್ನಲ್ಲಿ ಇಂದು ಮೈಸೂರು-ಕೊಡಗು ಲೋಕಸಭಾ ವ್ಯಾಪ್ತಿಯ ನಾಯಕರ ಜೊತೆ ಮೀಟಿಂಗ್ ನಡೆದ್ದಾರೆ.
ಮೈಸೂರು ಕೊಡುಗು ಲೋಕಸಭಾ ಗೆಲ್ಲಲು ಕ್ಷೇತ್ರದ ವ್ಯಾಪ್ತಿಗೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರಕ್ಕೊಂದು ಸ್ಟ್ರಾಟರ್ಜಿ ರೂಪಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈಗಾಗಲೇ ಒಕ್ಕಲಿಗ ಸಮುದಾಯ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದು ಈ ಮೂಲಕ ಒಕ್ಕಲಿಗ ಮತ ಕ್ರೂಢೀಕರಣದ ಪ್ಲಾನ್ ಹಾಕಿದ್ದಾರೆ.
ಬಿಜೆಪಿ ಪ್ರಬಲ ಮುಖಂಡ ಹೆಚ್.ವಿ ರಾಜೀವ್ ಸೆಳೆಯಲು ಯತ್ನ.
ಬಿಜೆಪಿಯು ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ಕೆ.ಆರ್ ಕ್ಷೇತ್ರಕ್ಕೆ ಬ್ರಾಹ್ಮಣ ಸಮುದಾಯದ ಪ್ರಬಲ ಮುಖಂಡ ರಾಜೀವ್ ರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಇದರ ಜೊತೆಗೆ ಅಹಿಂದ ಮತಗಳ ಕ್ರೂಢೀಕರಣ, ಇದಕ್ಕಾಗಿ ಪ್ರತಿ ಕ್ಷೇತ್ರದಲ್ಲಿ ಪ್ರಬಲ ಸಮುದಾಯ ಮುಖಂಡರಿಗೆ ಕ್ಷೇತ್ರವಾರು ಉಸ್ತುವಾರಿ ಕೊಡಲು ಪ್ಲಾನ್ ರೂಪಿಸಿದ್ದಾರೆ.
ಮೈಸೂರು ಜಿಲ್ಲಾ ಸಚಿವ ಉಸ್ತುವಾರಿ ಹೆಚ್.ಸಿ.ಮಹದೇವಪ್ಪ, ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಹುಣಸೂರು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಒಡಗೂಡಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಎರಡೂ ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳು ವಿಭಾಗ ಆಗದಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.
ಹೀಗಾಗಿ ಚಾಮರಾಜನಗರ ಕ್ಷೇತ್ರದ ಜವಾಬ್ದಾರಿಯನ್ನು ಸಚಿವ ಮಹದೇವಪ್ಪ ಹೆಗಲಿಗೆ ಹಾಕಿದ ಸಿದ್ದರಾಮಯ್ಯ ಅವರು, ಪುತ್ರ ಯತೀಂದ್ರಗೆ ವರುಣಾ, ಹೆಚ್.ಡಿ.ಕೋಟೆ, ನಂಜನಗೂಡು ಭಾಗದ ಜವಾಬ್ದಾರಿ ವಹಿಸಿದ್ದಾರೆ.
ಇನ್ನು ಕೊಡಗು ಹಾಗೂ ಮೈಸೂರು ಗ್ರಾಮಾಂತರ ಭಾಗದ ಜವಾಬ್ದಾರಿಯನ್ನ ಕೆ.ವೆಂಕಟೇಶ್ ಹೆಗಲಿಗೆ ಹಾಕಿದ್ದು ಲಕ್ಷ್ಮಣ್ ಪರ ನಿಂತು ಸ್ಥಳೀಯರನ್ನ ಒಗ್ಗೂಡಿಸುವಂತೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಮಾ.27 ರಂದು ಕಾಂಗ್ರೆಸ್ ಗೆ ಮಾಜಿ ಮುಡಾ ಅಧ್ಯಕ್ಷ ಎಚ್.ವಿ ರಾಜೀವ್.
ಮಾಜಿ ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಬಿಜೆಪಿ ತೊರೆದು ಮಾರ್ಚ್ 27 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ವಿದ್ಯಾರಣ್ಯಪುರಂ ಬಳಿ ಸಮಾವೇಶಕ್ಕೆ ವೇದಿಕೆ ಸಿದ್ದತೆ ನಡೆಸಲಾಗುತ್ತಿದ್ದು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮೂರ್ತಿ, ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಸಮ್ಮುಖದಲ್ಲಿ ಸಮಾವೇಶದ ವೇದಿಕೆ ಸಿದ್ದತಾ ಕಾರ್ಯ ವೀಕ್ಷಣೆ ನಡೆಸಿದರು.
ವೀಕ್ಷಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ವಿ ರಾಜೀವ್, ನಮ್ಮ ಭಾಗದ ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ನಾನು ಕಾಂಗ್ರೆಸ್ ಗೆ ಸೇರುತ್ತಿದ್ದೇನೆ. ನಮ್ಮ ನೆಚ್ಚಿನ ನಾಯಕ ಸಿಎಂ ಸಿದ್ದರಾಮಯ್ಯ ನವರ ಕಾರ್ಯ ವೈಖರಿಯನ್ನ ನೋಡಿ ಪಕ್ಷಕ್ಕೆ ಸೇರುತ್ತಿದ್ದೇನೆ. ನನಗೆ ಬಿಜೆಪಿಯಿಂದ ಯಾವುದೇ ತೊಂದರೆ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸೇರುತ್ತಿದ್ದೇನೆ. ನನ್ನ ಜೊತೆ ಕೆ.ವಿ ಮಲ್ಲೇಶ್, ಮಾಜಿ ಮೇಯರ್ ಭೈರಪ್ಪ ಸೇರಿದಂತೆ ಸಾವಿರಾರು ಬೆಂಬಲಿಗರೊಡನೆ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗುತ್ತಿದ್ದೇನೆ. ಮುಂದೆ ಕಾಂಗ್ರೆಸ್ ನ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪುವ ನಿಟ್ಟಿನಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
Key words: CM Siddaramaiah-win -Mysore Loksabha- plan – meeting