ಇಂದು ಸಿಎಂ ರಿಟ್ ಅರ್ಜಿ ವಿಚಾರಣೆ: ಎಲ್ಲರ ಚಿತ್ತ ಹೈಕೋರ್ಟ್ ನತ್ತ

ಬೆಂಗಳೂರು,ಸೆಪ್ಟಂಬರ್,12,2024 (www.justkannada.in):  ಮುಡಾ ಹಗರಣ ಕುರಿತು ರಾಜ್ಯಪಾಲರು ಪ್ರಾಸಿಕ್ಯೂಸನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಇಂದು 12 ಗಂಟೆಗೆ  ಹೈಕೋರ್ಟ್ ನಲ್ಲಿ ಸಿಎಂ‌ ಸಿದ್ದರಾಮಯ್ಯ ಅವರ ರಿಟ್ ಅರ್ಜಿಯ ಅಂತಿಮ ವಿಚಾರಣೆ ನಡೆಯಲಿದ್ದು,  ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.  ಇವರ ವಾದದ ಬಳಿಕ ರಾಜ್ಯಪಾಲರ ಪರ ಸುಪ್ರೀಂ ಕೋರ್ಟ್ ನ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡಲಿದ್ದಾರೆ. ಸಿಎಂ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ವಾದ ಪ್ರತಿವಾದ ನಡೆಯಲಿದೆ.  ಕಳೆದ ವಾರ ಸೆ.12ಕ್ಕೆ ವಿಚಾರಣೆ ಮುಗಿಸೋಣ ಎಂದು ನ್ಯಾಯಾಧೀಶರು ತಿಳಿಸಿದ್ದರು.

ದೂರುದಾರರ ಪರವಾಗಿ ಲಕ್ಷ್ಮಿ ಅಯ್ಯಂಗಾರ್, ರಾಘವನ್,ರಂಗನಾಥ್ ರಿಂದ ವಾದ ಮಂಡನೆ ಮಾಡಿದ್ದು ಸರ್ಕಾರದ ಪರವಾಗಿ ಅಡ್ವೊಕೇಟ್  ಜನರಲ್ ಶಶಿಕುಮಾರ್ ಶೆಟ್ಟಿ,ಪ್ರೊ.ರವಿಮರ್ಮ ಕುಮಾರ್ ಸೇರಿದಂತೆ ಹಲವರಿಂದ ವಾದ ಮಂಡನೆ ಮಾಡಲಾಗಿದೆ.

ಮುಡಾ ಪ್ರಕರಣ ಸಂಬಂಧ ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ ಅಬ್ರಹಾಂ ನೀಡಿದ್ದ ದೂರಿನ ಮೇರಗೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ದ  ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಇದನ್ನ ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ರಿಟ್ ಅರ್ಜಿ ಸಲ್ಲಿಸಿದ್ದರು.  ಇಂದಿನ ತೀರ್ಪು ರಾಜ್ಯ ಸರ್ಕಾರಕ್ಕೆ ನಿರ್ಣಾಯಕವಾಗಿರಲಿದ್ದು ಎಲ್ಲರ ಚಿತ್ತ ಹೈಕೋರ್ಟ್ ನತ್ತ ಮೂಡಿದೆ.

Key words: CM, Writ Petition, hearing, today, High Court