ಮೈಸೂರು, ಸೆಪ್ಟೆಂಬರ್ 30, 2019 (www.justkannada.in): ಸಿಎಂ ಬಿಎಸ್ವೈರಿಂದ ತಂತಿ ಮೇಲಿನ ನಡಿಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಎಸ್.ಎ.ರಾಮದಾಸ್ ಮಾತನಾಡಿದ್ದಾರೆ.
ಆ ಬಗ್ಗೆ ಮಾತನಾಡೋಕೆ ನಾನು ಇನ್ನು ಚಿಕ್ಕವನು. ಸಿಎಂ ಜೊತೆ ನಾವೇಲ್ಲ ಇದ್ದೇವೆ. ಅವರು ಯಾವುದಕ್ಕು ಚಿಂತಿಸುವ ಅಗತ್ಯವಿಲ್ಲ. ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಿಎಂಗೆ ಒತ್ತಡ ಇದ್ದೆ ಇರುತ್ತದೆ. ಅವರು ನಮ್ಮ ಟೀಂ ಕ್ಯಾಪ್ಟನ್. ಅವರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತೆ ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ಅನರ್ಹರ ಕುರಿತ ಶಾಸಕ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮೊದಲು ಮನೆಗೆ ಬಂದವರಿಗೆ ಊಟ ಹಾಕಬೇಕು. ನಾವು ಹಸಿದುಕೊಂಡಿದ್ದರು ಪರವಾಗಿಲ್ಲ ಅವರಿಗೆ ಊಟ ಹಾಕ್ತಿವಿ. ಅರ್ಹತೆ ವಿಚಾರದಲ್ಲಿ ಈ ಭಾಗದಲ್ಲಿ ನಾನೋಬ್ಬನೆ ಬಿಜೆಪಿಯಲ್ಲಿ ಹಳಬ.
ಆದ್ರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಸಂಘ ನನಗೆ ಒಂದು ಶಿಸ್ತು ಕಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ವರ್ತಿಸಬೇಕು ಅನ್ನೋದನ್ನ ನಾನು ಕಲಿತಿದ್ದೇನೆ.. ಹಾಗಾಗಿ ಉಮೇಶ್ ಕತ್ತಿ ಹೇಳಿಕೆ ಅವರಿಗೆ, ನನ್ನ ಅಭಿಪ್ರಾಯ ನನಗೆ ಎಂದು ಎಸ್.ಎ.ರಾಮದಾಸ್ ಹೇಳಿದ್ದಾರೆ.