ಬೆಂಗಳೂರು,ಫೆಬ್ರವರಿ,20,2021(www.justkannada.in): ಕೋವಿಡ್ ನಿಂದಾಗಿ ನಲುಗಿರುವ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಪ್ರವಾಸೋದ್ಯಮ, ಪರಿಸರ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಮೊನ್ನೆಯ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸಿಎಂ ಬಿಎಸ್ ವೈ ನಿರ್ಧರಿಸಿದ್ದಾರೆ. ಹೋಟಲ್ ಉದ್ಯಮವನ್ನು ಕೈಗಾರಿಕಾ ಉದ್ಯಮ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. 62 ಸ್ಟಾರ್ ಹೋಟೆಲ್ ಗಳನ್ನ ಕೈಗಾರಿಕಾ ವ್ಯಾಪ್ತಿಗೆ ತರಲಾಗಿದೆ. ಇದರಿಂದ ವಿದ್ಯುತ್, ಟ್ಯಾಕ್ಸ್ ಕಡಿಮೆ ಆಗಲಿದೆ ಎಂದರು.
62 ಹೋಟಲ್ ಗಳು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ವರ್ಗೀಕರಣ ಆಗಿದೆ. ವರ್ಗೀಕರಣದಿಂದ ಹೋಟಲ್ ಸೇವೆ ಉತ್ತಮ ಆಗಲಿದೆ. ವಿದ್ಯುತ್ ಶುಲ್ಕ, ಇಂಡಸ್ಟ್ರಿಯಲ್ ಮಾದರಿಯಲ್ಲಿ ನೀಡಲಿವೆ. ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ ಹೋಟಲ್ ಗಳು, 1 ಸ್ಪಾರ್ ನಿಂದ 5 ಸ್ಟಾರ್ ಹೋಟೆಲ್ ಗಳು ಇಂಡಸ್ಟ್ರಿಯಲ್ ವ್ಯಾಪ್ತಿಗೆ ತರಲು ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.
ನಂದಿ ಹಿಲ್ಸ್ ಪ್ರವಾಸೋದ್ಯಮ ವ್ಯಾಪ್ತಿಗೆ ಸಿಗಲಿದ್ದು. ಪ್ರಮುಖ ಪ್ರವಾಸಿ ತಾಣವಾಗಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಖಾಸಗೀಯವರ ಸಹಭಾಗಿತ್ವದಲ್ಲಿ ಪ್ರವಾಸಿ ತಾಣ ಅಭಿವೃದ್ಧಿ ಮಾಡಲಾಗುತ್ತದೆ. ನಂದಿ ಹಿಲ್ಸ್, ಕೋಡಚಾದ್ರಿ, ಜೋಗ್ ಜಲಪಾತ, ಕೆಮ್ಮಣ್ಣುಗುಂಡಿ ಪ್ರದೇಶಗಳ ಅಭಿವೃದ್ದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ಕರ್ನಾಟಕ ಪ್ರವಾಸೋದ್ಯಮ ಭವನ ನಿರ್ಮಾಣಕ್ಕೆ 10 ಎಕರೆ ಭೂಮಿ ನೀಡುವಂತೆ ಸಿಎಂ ಗೆ ಕೇಳಲಾಗಿದೆ ಎಂದರು.
Key words: CM’s -decision – tourism –development-Minister -C.P. Yogeshwar.