ಬೆಂಗಳೂರು,ಜೂ,20,2019(www.justkannada.in): ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಎನ್ನುತ್ತಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರವನ್ನ ನಾನು ಮಾಡಿದ್ದಲ್ಲ. ಸೋನಿಯಾ ಗಾಂಧಿ ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಮೈತ್ರಿ ಸರ್ಕಾರ ರಚನೆ ಆಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಮ್ಮಿಶ್ರ ಸರ್ಕಾರ ರಚನೆ ಬೇಡ ಎಂದು ಕಾಂಗ್ರೆಸ್ ನಾಯಕರಿಗೆ ಆಗಲೇ ಹೇಳಿದ್ದೆ. ಆದರೆ ಗುಲಾಂನಬಿ ಅಜಾದ್ ನನ್ನ ಕೈ ಹಿಡಿದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದಿದ್ದರು. ನಾನು ಕಾಂಗ್ರೆಸ್ ನಾಯಕರ ಪ್ರಸ್ತಾಪ ತಿರಸ್ಕರಿಸಿದ್ದೆ. ಆದರೆ ಗಾಂಧಿ ,ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಮೈತ್ರಿ ಸರ್ಕಾರ ರಚನೆ ಆಯಿತು ಎಂದರು.
ನಾನು ರಾಹುಲ್ ಗಾಂಧಿ ಭೇಟಿ ಮಾಡಿದ ವೇಳೆ ಬಹಿರಂಗ ಹೇಳಿಕೆ ನೀಡದಂತೆ ತಮ್ಮ ಪಕ್ಷದವರಿಗೆ ಸೂಚಿಸಿ ಎಂದು ಮನವಿ ಮಾಡಿದ್ದೇನೆ. ಪಕ್ಷದ ಬಗ್ಗೆ ಮಾತನಾಡದಂತೆ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದೇನೆ. ಇದನ್ನ ಬಿಟ್ಟು ರಾಹುಲ್ ಗಾಂಧಿ ಬಳಿ ಏನನ್ನು ಮಾತನಾಡಿಲ್ಲ ಎಂದರು.
ನಮ್ಮಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗಲ್ಲ. ಸರ್ಕಾರಕ್ಕೆ ತೊಂದರೆ ಆಗುವ ಆಗೆ ನಾನು ಮಾತನಾಡಲ್ಲ. ನಮ್ಮ ಪಕ್ಷದವರು ಮಾತನಾಡಲ್ಲ ಎಂದು ಹೆಚ್.ಡಿ ದೇವೇಗೌಡರು ಭರವಸೆ ನೀಡಿದರು.
ಹೆಚ್.ವಿಶ್ವನಾಥ್ ಮತ್ತೆ ಮನವೊಲಿಸುವೆ…
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ, ಹೆಚ್.ವಿಶ್ವನಾಥ್ ಅವರನ್ನ ಮತ್ತೆ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವರು ಜೆಡಿಎಸ್ ಪಕ್ಷ ತೊರೆಯಲ್ಲ. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರಲ್ಲ ಎಂದು ಹೇಳುತ್ತಿದ್ದಾರೆ ಅಂತಾ ಸ್ಪಷ್ಟನೆ ನೀಡಿದರು.
Some leaders have opined that coalition is hurting both parties. But we did not broach this idea it was Rahul Gandhi, Sonia Gandhi and Azad. I told them we didn’t want this but Parameshwara and Muniyappa approached us. Kharge told me that he had been ordered to ensure this happens. I’ve called the meeting tomorrow only to talk about my party and no discussion will be held on coalition government, cabinet expansion. There will be many local body elections in the coming year and I’m concentrating on that.
Among regional parties there are two sets of opinions on one nation one poll
Non NDA regional parties welcomed but some haven’t welcomed. Only thing is there might be confusion and that is the disadvantage according to me. In the same polling booth there will be multiple machines for national and state elections. Hence i have my doubts because we have not gone so far ahead
tomorrow our party will hold meeting of all members. I said that day those who are committed workers will be felicitated. Our president has said that he will not quit the party but does not want to continue in post. I have called a meeting of backward class leaders. We will try and convince him otherwise. Another development, I briefed Rahul Gandhi and told him to reconsider his stand to resign. We also have dissidence but we have also left a cabinet berth for independent, but nobody should make any public statements against government. This is what I told Rahul Gandhi. Only one appeal that since we have also let go of one post and both independent are from Congress. Kumaraswamy also agreed to this based on Siddaramaiah suggestion. However repeatedly no matter what good work we do the image of the coalition shouldn’t be hurt. That’s all I told Rahul Gandhi. On 23rd I’ll call a meeting of those who lost and hold a meeting. This decision was taken when I felicitated those who won in ULB polls.
Key words: coalition government-hd devegowda- Rahul Gandhi- Sonia Gandhi