ಮೈಸೂರು, ಮಾರ್ಚ್ 02, 2023 (www.justkannada.in): ಡಿಜಿಟಲ್ ಯುಗದಲ್ಲಿ ಎಲ್ಲವೂ ಅಂಗೈಯಲ್ಲೇ ಸಿಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಎರಡನೇ ದರ್ಜೆಯ ಪಟ್ಟಣದಲ್ಲಿದ್ದುಕೊಂಡೇ ಉದ್ಯಮವನ್ನು ಎಲ್ಲೆಡೆಗೆ ಕೊಂಡೊಯ್ಯಬಹುದು ಎಂಬುದನ್ನು ಸಾಬೀತು ಪಡಿಸಿದ್ದಾರೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಯುವಕ ಬಸವಂತ್ ಕುಮಾರ್ ಎಂ.ಪಿ.
ಮೇಧಾವಿ ಸೂಪರ್ ಫುಡ್ ಡಾಟ್ ಕಾಮ್ ವೆಬ್ ಸೈಟ್ ಮೂಲಕ ಈ ಕಾಮರ್ಸ್ ಉದ್ಯಮ ಆರಂಭಿಸಿರುವ ಬಸವಂತ್ ಕುಮಾರ್ ಅವರು ಕೊಳ್ಳೇಗಾಲದಂತಹ ಚಿಕ್ಕ ಪಟ್ಟಣದಲ್ಲಿದ್ದುಕೊಂಡೇ ತಮ್ಮ ಉದ್ಯಮವನ್ನು ದೇಶದ ಮೂಲೆ ಮೂಲೆಗೆ ಕೊಂಡೊಯ್ಯಬಹುದು ಎಂಬುದನ್ನು ನಿರೂಪಿಸುತ್ತಿದ್ದಾರೆ. ಇದರೊಂದಿಗೆ ಈ ಕಾಮರ್ಸ್ ಉದ್ಯಮದಲ್ಲಿ ಬೆಳೆಯುತ್ತಿರುವ ದೇಶದ ಟಾಪ್ 10 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಅನ್ನದಿಂದ ಹಿಡಿದು ಎಲ್ಲ ಆಹಾರ ಪದಾರ್ಥಗಳಿಗೂ ರಾಸಾಯನಿಕಗಳು ಸೇರುತ್ತಿವೆ. ಇದರಿಂದ ಆಹಾರದ ಗುಣಮಟ್ಟ ಕುಸಿದು ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇನ್ನೂ ಅಡುಗೆ ಎಣ್ಣೆ ವಿಷಯದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಇಂತಹ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಈ ಹಿಂದೆ ನಮ್ಮ ಹಿರಿಯರು ಅನುಸರಿಸುತ್ತಿದ್ದ ಗಾಣದ ಎಣ್ಣೆ ಬಳಕೆಯನ್ನು ಮತ್ತೆ ಮುನ್ನಲೆಗೆ ತರುವ ಪ್ರಯತ್ನದಲ್ಲಿದ್ದಾರೆ ಬಸವಂತ್.
ಸ್ಥಳೀಯ ರೈತರಿಂದ ಗುಣಮಟ್ಟದ ಬೀಜಗಳನ್ನು ಪಡೆದು ಅದರಿಂದ ಗುಣಮಟ್ಟದ ಗಾಣದ ಎಣ್ಣೆಯನ್ನು ತಯಾರಿಸಿ ಅದನ್ನು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಆರಂಭಿಸಿ ಆರಂಭದಲ್ಲೇ ಯಶಸ್ಸು ಗಳಿಸಿದ್ದಾರೆ. ಆರಂಭಿಕವಾಗಿ ಕೊಳ್ಳೇಗಾಲದಲ್ಲಿ ಮೊದಲ ಮಳಿಗೆ ಆರಂಭಿಸಿ ಇಲ್ಲಿಂದಲೇ ಆನ್ ಲೈನ್ ಮೂಲಕ ದೇಶದ ಎಲ್ಲ ನಗರಗಳಿಗೆ ಗುಣಮಟ್ಟದ ಗಾಣದ ಎಣ್ಣೆ ಪೂರೈಸುವ ಕೆಲಸ ಮಾಡುತ್ತಿದ್ದಾರೆ.
ಮೂಲತಃ ಸಾಫ್ಟವೇರ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವಂತ್ ಕುಮಾರ್ ಅವರು ಮೇಧಾವಿ ಸೂಪರ್ ಫುಡ್ ಈ ಕಾಮರ್ಸ್ ಸಂಸ್ಥೆಗಾಗಿ ಕೆಲಸ ತೊರೆದು ಸಂಪೂರ್ಣವಾಗಿ ತಮ್ಮನ್ನು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಣ್ಣ ಉದ್ಯಮವೊಂದನ್ನು ಆರಂಭಿಸಲು ಮೆಟ್ರೋ ನಗರಗಳೇ ಆಗಬೇಕಿಲ್ಲ. ಪ್ರಪಂಚವೇ ಪುಟ್ಟ ಹಳ್ಳಿಯಾಗಿ ಮಾರ್ಪಡಿಸಿರುವ ತಂತ್ರಜ್ಞಾನದ ಸಹಾಯದಿಂದ ಸಣ್ಣ ಪಟ್ಟಣದಲ್ಲಿ ಕುಳಿತುಕೊಂಡೇ ಉದ್ಯಮವನ್ನು ಯಶಸ್ವಿಯಾಗಿ ನಡೆಸಬಹುದು ಎಂಬುದನ್ನು ತೋರಿಸುವ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ತಮ್ಮಸಂಸ್ಥೆ ಮೂಲಕ ಸ್ಥಳೀಯ ರೈತರಿಗೂ ನೆರವಾಗಬಹುದು. ಜತೆಗೆ ಉದ್ಯೋಗ ಅರಸಿ ದೊಡ್ಡ ಪಟ್ಟಣ ಸೇರುವ ಯುವಕರಿಗೂ ತಮ್ಮ ಊರಿನಲ್ಲಿಯೇ ಉತ್ತಮ ವೇತನದ ಉದ್ಯೋಗ ದೊರಕಿಸಬಹುದು ಎಂಬುದನ್ನು ಬಸವಂತ್ ಅವರು ತೋರಿಸಿದ್ದಾರೆ.
ಮೊದಲ ಹಂತವಾಗಿ ಗಾಣದ ಎಣ್ಣೆ ಪೂರೈಕೆ ಆರಂಭಿಸಿರುವ ಬಸಂತ್ ಅವರು ಮುಂದಿನ ದಿನಗಳಲ್ಲಿ ತುಪ್ಪ, ಮಸಾಲೆ ಪದಾರ್ಥಗಳು ಸೇರಿದಂತೆ ಗುಣಮಟ್ಟ ನೈಸರ್ಗಿಕ ಉತ್ಪನ್ನಗಳ ಮಾರಾಟವನ್ನು ಆರಂಭಿಸುವ ಯೋಜನೆ ಹೊಂದಿದ್ದಾರೆ. ಜತೆಗೆ ವಿವಿಧ ನಗರಗಳಲ್ಲಿ ತಮ್ಮ ಸಂಸ್ಥೆಯ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದ್ದಾರೆ.
ಸಂಸ್ಥೆಯ ಉತ್ಪನ್ನಗಳಲ್ಲಿ ಗುಣಮಟ್ಟದ ಕಾಯ್ದುಕೊಳ್ಳವ ಜತೆಗೆ ಪ್ಯಾಕಿಂಗ್ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಆಹಾರ ಪೂರೈಕೆ ಹೆಸರಿನಲ್ಲೂ ಗ್ರಾಹಕರನ್ನು ವಂಚಿಸುವ ಕೆಲಸ ನಡೆಯುತ್ತಿದೆ. ಇದನ್ನು ತಪ್ಪಿಸಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದ ಅಡುಗೆ ಎಣ್ಣೆಯನ್ನು ಪೂರೈಸಿಸುವುದು ಜತೆಗೆ ಸ್ಥಳೀಯ ರೈತರಿಗೂ ನೆರವಾಗುವುದು ನಮ್ಮ ಉದ್ದೇಶ ಎನ್ನುತ್ತಾರೆ ಬಸವಂತ್.
ನೈಸರ್ಗಿಕ ಗಾಣದ ಎಣ್ಣೆ ಕೊಳ್ಳಲು ಬಯಸುವವರು www.medhavisuperfoods.com ವೆಬ್ ಸೈಟ್ ಗೆ ಭೇಟಿ ನೀಡಿ ಆರ್ಡರ್ ಮಾಡಬಹುದಾಗಿದೆ.
Medhavi Superfoods
#7-1535(A) Jaya Institute Road, Southern Extension, Kollegal-571440
Phone Number 91-9886889637