ಮೈಸೂರು,ಸೆಪ್ಟಂಬರ್,17,2020(www.justkannada.in): ತಮ್ಮ ಮೇಲಿನ ಕೇಸ್ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನನ್ನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಂ.ಲಕ್ಷ್ಮಣ್, ಹಾಗೂ ಮಂಜುಳಾ ಮಾನಸ ಯಾರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಿಜೆಪಿಯವರ ಈ ಬೆದರಿಸುವ ತಂತ್ರಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂ. ಲಕ್ಷ್ಮಣ್, ಲಕ್ಷ್ಮಣ್ ಹಾಗೂ ಮಂಜುಳಾ ಮಾನಸ ಯಾರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸರು ನನ್ನ ಹಾಗೂ ಮಂಜುಳಾ ಮಾನಸ ಯಾರು ,ಎಷ್ಟು ವರ್ಷದಿಂದ ಎಲ್ಲಿದ್ದರು ಎಂಬೆಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸರ ಕೆಲಸ ಏನು ಎಂದು ನನಗೆ ತಿಳಿಯುತ್ತಿಲ್ಲ. ನಾಳೆ ಅಥವಾ ನಾಳಿದ್ದು ಬೆಂಗಳೂರಿನ ಕಮಿಷನರ್ ಭೇಟಿ ಮಾಡಿ ಏನು ಮಾಹಿತಿ ಬೇಕು ಕೇಳುತ್ತೇನೆ ಎಂದು ತಿಳಿಸಿದರು.
ಬಿಜೆಪಿಯವರ ಈ ಬೆದರಿಸುವ ತಂತ್ರಕ್ಕೆ ನಾವು ಹೆದರುವುದಿಲ್ಲ. ನಮ್ಮ ಮನೆಯ ಸುತ್ತ ಮುತ್ತ ಎಲ್ಲಾರನ್ನು ವಿಚಾರಿಸುತ್ತಿದ್ದಾರೆ. ಪಾರ್ಕ್ ನಲ್ಲಿ ವಾಕಿಂಗ್ ಗೆ ಜನರನ್ನು ಬಿಡುತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಕಳೆದ 6 ವರ್ಷದಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
Key words: collection- information – me – police- KPCC spokesperson- M. Laxman.