ಬೆಂಗಳೂರು:ಆ-26:(www.justkannada.in) ರಾಜ್ಯದ ವಿವಿಧ ಸರ್ಕಾರಿ, ಅನುದಾನಿತ ಕಾಲೇಜುಗಳು ಕಳೆದ ಏಪ್ರೀಲ್ ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.
ತೀವ್ರ ಹಣಕಾಸಿನ ತೊಂದರೆಯಿಂದಾಗಿ 81 ಕ್ಕೂ ಹೆಚ್ಚು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು, 11 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, 11 ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು, 11 ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳು ಮತ್ತು ರಾಜ್ಯದ 6 ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳು ಬೆಸ್ಕಾಂ ಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ ಪರಿಣಾಮ ಈ ಎಲ್ಲಾ ಕಾಲೇಜುಗಳು ‘ವಿದ್ಯುತ್’ ಸಮಸ್ಯೆಗಳನ್ನು ಎದುರಿಸುತ್ತಿವೆ .
ವಿಶೇಷವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ತಾಂತ್ರಿಕ ಕಾಲೇಜುಗಳು ಕೂಡ ಕಳೆದ ಏಪ್ರಿಲ್ನಿಂದ ತಮ್ಮ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚೆಗೆ, ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜುಬಿಲಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ (SKSJTI) ಪ್ರಕರಣವನ್ನು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು ಅಲ್ಲದೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಮ್) ತನ್ನ ಬಿಲ್ಗಳನ್ನು ಪಾವತಿಸುವಂತೆ ಸಂಸ್ಥೆಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೂ ಹೇಳಿತ್ತು. ಆದಾಗ್ಯೂ ಇಂದಿನವರೆಗೂ ಪರಿಸ್ಥಿತಿ ಬದಲಾಗಿಲ್ಲ.
ಆದರೆ ತಾಂತ್ರಿಕ ಶಿಕ್ಷಣ ಇಲಾಖೆ ಈ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಮತ್ತು ಯಾವಯಾವ ಕಾಲೇಜುಗಳಿಗೆ ಎಷ್ಟು ಮೊತ್ತ ಎಂಬುದನ್ನು ರವಾನಿಸಿಲ್ಲ ಎಂದು ಹೇಳಿಕೆ ನೀಡುತ್ತಿದೆ.
ರಾಮನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ವಿಜಯ್ ಕುಮಾರ್ ಆರ್ ಹೇಳುವ ಪ್ರಕಾರ ಇದು ನಮಗೆ ಪ್ರತಿ ತಿಂಗಳು ಎದುರಾಗುವ ದೊಡ್ಡ ಸಮಸ್ಯೆಯಾಗಿದೆ. ಕಾಲೇಜಿನಲ್ಲಿ ನಮ್ಮ ಪ್ರಯೋಗಾಲಯಗಳು ಮತ್ತು ಕಂಪ್ಯೂಟರ್ ಗಳಿಗೆ ಸದಾ ವಿದ್ಯುತ್ ಅಗತ್ಯವಿರುವುದರಿಂದ, ಯಾವಾಗಲೂ ನಮಗೆ ಕಂರೆಂಟ್ ಬೇಕೆಬೇಕು. ಹಾಗಾಗಿ ನಾನು ಮುಂಗಡವಾಗಿಯೇ ಬಿಲ್ ಪಾವತಿ ಮಾಡುತ್ತೇನೆ. ಕಳೆದ ಕೆಲವು ತಿಂಗಳುಗಳಿಂದ, ನಾನು ಕಳೆದ ಡಿಸೆಂಬರ್ನಲ್ಲಿ (2018) ಹೆಚ್ಚುವರಿ ಬಿಲ್ ಸಂಗ್ರಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕಾಲೇಜುಗಳಿಗೆ ಏಕೆ ಹಣರವಾನೆಯಾಗಿಲ್ಲ ಎಂಬುದಕ್ಕೆ ತಾಂತ್ರಿಕ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಗಳು ಹೇಳುವ ಪ್ರಕಾರ, “ಕಾಲೇಜು ಅಧಿಕಾರಿಗಳು ತಮ್ಮ ಬಿಲ್ಗಳ ಕುರಿತು ನಮಗೆಮಾಹಿತಿ ನೀಡಿ ವಿನಂತಿಯನ್ನು ಕಳುಹಿಸಬೇಕು. ಇದನ್ನು ಅನುಮೋದಿಸಿದ ನಂತರವೇ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಕೆಲವೊಮ್ಮೆ ಅಕೌಂಟ್ ಮುಖ್ಯಸ್ಥರ ಬದಲಾವಣೆಯಿಂದಾಗಿ ಹಣ ಬಿಡುಗಡೆಗೆ ಕೊಂಚ ವಿಳಂಬವಾಗುತ್ತದೆ ಎಂದಿದ್ದಾರೆ.
ಅಧಿಕಾರಿಗಳ ಈ ಹೇಳಿಕೆಗಳಿಗೆ ಹಲವು ಕ್ಲಾಲೇಜುಗಳು ಸಮಾಧಾನವಾಗಿಲ್ಲ. ಇನೋರ್ವ ಕಾಲೇಜು ಪ್ರಾಂಶುಪಾಲರು ಎಲ್ಲಾ ಕಾಲೇಜುಗಳ ಪ್ರಿನ್ಸಿಪಾಲರೂ ಒಗ್ಗಟ್ಟಾಗಿ ಹೋಗಿ ಹಣ ಬಿಡುಗಡೆಮಾಡುವಂತೆ ಕೇಳಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್ಯು ತಲ್ವಾರ್, “ಕೆಲವು ಕಾಲೇಜುಗಳು ಇನ್ನೂ ತಮ್ಮ ಬಿಲ್ ಪಾವತಿಗಾಗಿ ವಿನಂತಿಯನ್ನು ಮಾಡಬೇಕಾಗಿದೆ. ಖಾತೆಗಳ ಮುಖ್ಯಸ್ಥರನ್ನು ರಚಿಸಲಾಗಿಲ್ಲ ಮತ್ತು ಕಳೆದ ತ್ರೈಮಾಸಿಕದಲ್ಲಿ ನಮಗೆ ಹಣ ಬಂದಿರಲಿಲ್ಲ ಈಗ ಅದು ಬಂದಿದೆ. ಹಾಗಾಗಿ ಈಗ ನಾವು ಹಣ ಬಿಡುಗಡೆಮಾಡಬೇಕಿದೆ ಎಂದು ಹೇಳಿದ್ದಾರೆ.
ಪ್ರಾಂಶುಪಾಲರು ಸಮಸ್ಯೆಯನ್ನು ಎದುರಿಸುತ್ತಿರುವಾಗ, ಅವರು ಬಂದು ನಮಗೆ ತಿಳಿಸಬೇಕು ಮತ್ತು ನಾವು ಅದನ್ನು ಇತರ ಖಾತೆಗಳೊಂದಿಗೆ ಹೊಂದಿಸಿ ಪಾವತಿಸಬೇಕಾದ ಹಣ ಬಿಡುಗಡೆಮಾಡುತ್ತೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾವು ಹಣವನ್ನು ಸರಿಹೊಂದಿ ಕಾಲೇಜುಗಳಿಗೆ ಹಣ ಬಿಡುಗಡೆಮಾಡುವ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಕಾಲೇಜು ಪ್ರಾಂಶುಪಾಲರು ನಮಗೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.