ಮೈಸೂರು,ಫೆ,9,2020(www.justkannada.in): ಕಾರು ಮತ್ತು ಬೈಕ್ ನಡುವೆ ಮುಖಾಮಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಕೊಲ್ಲೇಗೌಡನಹಳ್ಳಿ ಬಳಿ ಈ ಘಟನೆ ನಡೆದಿದೆ. ಸುಣ್ಣಕಲ್ಲುಮುಂಟಿ ಗ್ರಾಮದ ಬೆಟ್ಟಶೆಟ್ಟಿ (45) ಗಾಯಗೊಂಡ ಬೈಕ್ ಸವಾರ. ಗಾಯಾಳು ಬೆಟ್ಟಶೆಟ್ಟಿಯನ್ನ ಜಿಲ್ಲಾಸ್ವತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೇರಳ ಮೂಲದ ಐ-10ಕಾರಿನ ಸಮೇತ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: collision- between – car – bike-Serious injury – rider-mysore