ಉಡುಪಿ,ಮೇ,28,2022(www.justkannada.in): ಪಠ್ಯ ಪರಿಷ್ಕರಣೆ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಊಹಾಪೋಹ ಹಬ್ಬಿಸುವುದು ನಿಮ್ಮ ಉದ್ದೇಶವಾಗಿದೆ. ವಿಚಾರ ನಪುಂಸಕತೆ ಇಲ್ಲದಿದ್ದರೇ ಚರ್ಚೆಗೆ ಬನ್ನಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ .ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
ಉಡುಪಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಾಜ, ಕನ್ನಡ ವಿಷಯ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಈ ವಿಚಾರದಲ್ಲಿ ಊಹಾಪೋಹ ಸೃಷ್ಠಿ ಮಾಡ್ತಿದ್ದಾರೆ. ರೋಹಿತ್ ಚಕ್ರತೀರ್ಥ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಚರ್ಚೆಯಿಂದ ಯಾಕೆ ಪಲಾಯಾನ ಮಾಡ್ತ ಇದ್ದೀರಿ. ಊಹಾಪೂಹ ಹಬ್ಬಿಸುವುದು ನಿಮ್ಮ ಉದ್ದೇಶ. ತಕರಾರು ಎತ್ತುವವರು ವಿಚಾರ ನಪುಂಸಕರು. ವಿಚಾರ ನಪುಂಸಕತೆ ಇಲ್ಲದಿದ್ದರೇ ಚರ್ಚೆಗೆ ಬನ್ನಿ. ಇವರಲ್ಲಿ ವಿಚಾರ ಇಲ್ಲ ಬರೀ ಉಗುಳ ಮಾತ್ರ ಎಂದು ಟೀಕಿಸಿದರು.
ನಾರಾಯಣಗುರು ಅವರ ಪಾಠ ಕನ್ನಡ ಪಾಠಕ್ಕೆ ವರ್ಗಾವಣೆ ಮಾಡಲಾಗಿದೆ. 7ನೇ ತರಗತಿ ಪಾಠದಲ್ಲೂ ನಾರಾಯಣಗುರು ಪಾಠ ಇದೆ ಎಂದರು.
Key words: Come up – discussion –dk shivakumar-siddaramaiah-MP-Pratap simha