ಮೈಸೂರು,ನವೆಂಬರ್,07,2020(www.justkannada.in) : ಏಕಾಂಗಿ ಜೀವನ ಮುಗಿಸಿ, ಜಂಟಿಯಾಗುವ ಮದುವೆಯ ಸಂಭ್ರಮವು ಪ್ರತಿಯೊಬ್ಬರಿಗೂ ಒಂದು ರೀತಿಯ ವಿಶೇಷ. ಈ ಸಂಭ್ರಮಕ್ಕೆ ತಮ್ಮ ಪ್ರೀತಿ ಪಾತ್ರರನ್ನು ಆಹ್ವಾನಿಸಲು ಅನೇಕರು ವಿಭಿನ್ನ ರೀತಿಯಲ್ಲಿ ಆಹ್ವಾನಪತ್ರಿಕೆ ಸಿದ್ಧಪಡಿಸುತ್ತಾರೆ. ಈ ಸಾಲಿನಲ್ಲಿ ಪತ್ರಕರ್ತ ಕಚುವನಹಳ್ಳಿ ಶ್ರೀಧರ್ ಒಬ್ಬರಾಗಿದ್ದಾರೆ.
ಪತ್ರಿಕೆಯ ಮುಖಪುಟದ ಮಾದರಿಯಲ್ಲಿ ಆಹ್ವಾನ ಪತ್ರಿಕೆ
ರಾಜ್ಯಮಟ್ಟದ ದಿನಪತ್ರಿಕೆ ವಿಜಯಕರ್ನಾಟಕದ ರಾಮನಗರ ಜಿಲ್ಲಾ ವರದಿಗಾರ ಕಚುವನಹಳ್ಳಿ ಶ್ರೀಧರ್ ತಮ್ಮ ವಿವಾಹ ಆಹ್ವಾನ ಪತ್ರಿಕೆಯನ್ನು ತಮ್ಮದೇ ಪತ್ರಿಕೆಯ ಮುಖಪುಟದ ಮಾದರಿಯಲ್ಲಿ ಸಿದ್ಧಪಡಿಸಿ ಪ್ರೀತಿಪಾತ್ರರನ್ನು ಆಹ್ವಾನಿಸುತ್ತಿರುವುದು ವಿಶೇಷ.
ವಿಶೇಷ ವರದಿಯ ಮಾದರಿಯಲ್ಲಿ ವಿವಾಹ ಮಹೋತ್ಸವದ ಸ್ಥಳ, ಸಮಯದ ಕುರಿತು ಮಾಹಿತಿ
ಪತ್ರಿಕೆಯ ಮುಖಪುಟದಂತ್ತಿರುವ ಆಹ್ವಾನ ಪತ್ರಿಕೆಯಲ್ಲಿ ವಿವಾಹ ಮಹೋತ್ಸವ ಎಲ್ಲಿ, ಧಾರೆ ಮಹೋರ್ತದ ಸಮಯ, ಕಲ್ಯಾಣ ಮಂಟಪಕ್ಕೆ ಬರುವ ಮಾರ್ಗ… ಹೀಗೆ ಎಲ್ಲಾ ಅಂಶಗಳನ್ನು ಪ್ರತ್ಯೇಕವಾಗಿ ವಿಶೇಷ ವರದಿಯ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ.
ರೇಗಿಸ್ತಿದ್ದವರಿಗೆ ಈಗ ನಾನು ಉತ್ತರ ನೀಡುವ ಟೈಂ ಬಂದಿದೆ
ರಾಜಕೀಯ, ಸಮಸ್ಯೆ, ಎಲೆಕ್ಷನ್, ಫೋನ್ಇನ್, ಸಂದರ್ಶನಗಳೆಂದು ವರ್ಷಪೂರ್ತಿ ನಿಮ್ಮೆಲ್ಲರನ್ನು ಸದಾ ಸಂಪರ್ಕಿಸುತ್ತಿದ್ದ ನನಗೆ ಕಂಕಣ ಭಾಗ್ಯ ಕೈಬೀಸಿ ಕರೆಯುತ್ತಿದೆ. ಇಲ್ಲಿಯವರೆಗೆ ಬ್ಯಾಚುಲರ್ ಆಗಿದ್ದ ನನ್ನ ಬದುಕಿನಲ್ಲಿ ಸಂಗಾತಿಯ ನೆರಳು ಜತೆಯಾಗಲಿದೆ. ನಿಮಗ್ಯಾರು, ಹೆಣ್ಣು ಕೊಡ್ತಾರೆ? ಯಾವಾಗ ಮದುವೆ? ನಮಗೆ ಊಟ ಹಾಕಿಸ್ತಿಯೋ ಇಲ್ಲವೋ? ನಿನಗೆ ಮದುವೆ ಆಗ್ಲಿ ಇರು.! ಆಗ ಬರೆಯೋದನ್ನ ಒಸಿ ಕಡಿಮೆ ಮಾಡ್ತಿಯಾ…! ನಿನಗೆ ಒಂದು ಹುಡುಗಿನು ಬೀಳಲಿಲ್ಲವಲ್ಲೊ..! ಹೀಗೆ, ಫೋನ್ ನಲ್ಲಿಯು ಬಿಡದೆ ರೇಗಿಸ್ತಿದ್ದವರಿಗೆ ಈಗ ನಾನು ಉತ್ತರ ನೀಡುವ ಟೈಂ ಬಂದಿದೆ ಎಂದು ಕಚುವನಹಳ್ಳಿ ಶ್ರೀಧರ್ ಆಹ್ವಾನ ಪತ್ರಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತನ ಬಾಳಿಗೆ ಉಪನ್ಯಾಸಕಿಯಾದ ಸ್ಪೂರ್ತಿ ಜತೆಈ ಜನರ್ಲಿಸ್ಟ್ ಬಾಳಲಿ ಉಪನ್ಯಾಸಕಿಯಾದ ಸ್ಪೂರ್ತಿ ಪಾಠ ಮಾಡಲು ಜತೆಯಾಗುತ್ತಿದ್ದಾಳೆ. ನಿಮ್ಮೆಲ್ಲರ ಸುಮ್ಮುಖದಲ್ಲಿ ಜೀವನದ ಹೊಸ ಪಯಾಣಕ್ಕೆ ಕಾಲಿಡಬೇಕೆಂಬ ಬಯಕೆಯಿಂದ ಈ ಆಮಂತ್ರಣ ಪತ್ರಿಕೆ ಮೂಲಕ ಆತ್ಮೀಯವಾಗಿ ಆಮಂತ್ರಿಸುತ್ತಿದ್ದೆನೆ ಎಂದು ಪ್ರೀತಿಯಿಂದ ಮದುವೆಗೆ ಆಹ್ವಾನಿಸಿದ್ದಾರೆ.
key words : Come-Miss-Madde’s-wedding …!-Special-invitation-wedding-journalist