ಬೆಂಗಳೂರು:ಆ-13: ಇಂಜಿನಿಯರಿಂಗ್ ಕೋರ್ಸ್ಗಳಿಗೆ ಇದ್ದ ಬೇಡಿಕೆ ವರ್ಷ ದಿಂದ ವರ್ಷಕ್ಕೆ ಕುಸಿಯುತ್ತಿರುವ ಪರಿಣಾಮ, ಕಾಲೇಜು ಗಳಲ್ಲಿ ಸಾಕಷ್ಟು ಸೀಟುಗಳು ಖಾಲಿ ಉಳಿದುಕೊಳ್ಳುತ್ತಿವೆ.
2019-20ನೇ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ಸೀಟುಗಳ ಹಂಚಿಕೆ ಮಾಡುವ ಕಾಮೆಡ್-ಕೆ ಬಳಿ ಶೇ.60ಕ್ಕೂ ಹೆಚ್ಚಿನ ಸೀಟುಗಳ ಖಾಲಿ ಉಳಿದಿವೆ. ಕಾಮೆಡ್-ಕೆ 16,216 ಇಂಜಿನಿಯರಿಂಗ್ ಸೀಟುಗಳಿಗೆ ಎರಡು ಬಾರಿ ಕೌನ್ಸೆಲಿಂಗ್ ನಡೆಸಿದ ಪರಿಣಾಮ 6,434 ಸೀಟುಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 9,782 ಸೀಟುಗಳು ಖಾಲಿ ಉಳಿದುಕೊಂಡಿವೆ.
ಇಷ್ಟು ವರ್ಷ ಕಾಮಡೆ-ಕ್ ಮತ್ತು ಸರ್ಕಾರಿ ಕೋಟಾದಡಿ ನಿಗದಿಪಡಿಸಿರುವ ಶುಲ್ಕದ ಹೊರತಾಗಿ 20 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೆ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುತ್ತಿದ್ದವು. ಆದರೆ, ಉಳಿಕೆ ಸೀಟುಗಳು ಭರ್ತಿಯಾಗಲಿ ಎಂಬ ಉದ್ದೇಶದಿಂದ ಕೆಲವು ಕಾಲೇಜುಗಳು ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವುದನ್ನು ನಿಲ್ಲಿಸಿವೆ. ಆ ನಿಟ್ಟಿನಲ್ಲಿ ಕಾಲೇಜುಗಳು ಸ್ವಪ್ರೇರಣೆಯಿಂದ ಉಳಿಕೆ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸಲ್ಲಿಸಿವೆ ಎಂದು ತಿಳಿದುಬಂದಿದೆ.
ಕೆಇಎ 2ನೇ ಸುತ್ತಿನ ಮುಂದುವರಿಕೆಯಲ್ಲಿ ಸೀಟು ಹಂಚಿಕೆ ಮಾಡಿದ್ದು, ಪ್ರವೇಶಕ್ಕೆ ಆ.13 ಕೊನೆಯ ದಿನ ನಿಗದಿ ಮಾಡಿದೆ. ಹೀಗಾಗಿ ಇಲ್ಲಿ ಉಳಿಕೆಯಾಗಿರುವ ಸೀಟುಗಳ ಮಾಹಿತಿ ಬರಬೇಕಿದೆ. ಕೆಇಎ ಮೂಲಕ ಸೀಟು ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ 58,800 ರೂ. ಮತ್ತು ಕಾಮೆಡ್-ಕೆ 2,01,960 ರೂ. ಪ್ರವೇಶ ಶುಲ್ಕ ನಿಗದಿ ಪಡಿಸಿದೆ. ಬಹುತೇಕ ವಿದ್ಯಾರ್ಥಿಗಳು ಕಾಮೆಡ್-ಕೆ ಮೊದಲ ಸುತ್ತಿನಲ್ಲಿ 1,500ಕ್ಕೂ ಹೆಚ್ಚಿನ ಸೀಟು ಪಡೆದುಕೊಂಡು 2ನೇ ಸುತ್ತಿನಲ್ಲಿ ಮತ್ತೆ ಕಾಮೆಡ್-ಕೆಗೆ ಬಿಟ್ಟುಕೊಟ್ಟ ಪರಿಣಾಮ ಹೆಚ್ಚಿನ ಸೀಟು ಉಳಿಕೆಯಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.
3ನೇ ಸುತ್ತಿಗೂ ಅವಕಾಶ ನೀಡಿ
ಕಾಮೆಡ್-ಕೆ ಮತ್ತು ಕರ್ನಾಟಕ ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಸಂಘದಡಿ (ಕೆಆರ್ಎಲ್ಎಂ) ಉಳಿಯುವ ಸೀಟುಗಳಿಗೆ 3ನೇ ಸುತ್ತಿನಲ್ಲಿ ಹಂಚಿಕೆ ಮಾಡುವಂತೆ ತಾಂತ್ರಿಕ ಶಿಕ್ಷಣ ಇಲಾಖೆ ಕಾಮೆಡ್-ಕೆ ಬಳಿ ಮನವಿ ಮಾಡಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ಕೋರ್ಸ್ಗಳ ಆಯ್ಕೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಈ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾಮೆಡ್-ಕೆ ಮತ್ತು ಕೆಆರ್ಎಲ್ಎಂ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಖಾಲಿ ಸೀಟುಗಳನ್ನು ಆಡಳಿತ ಮಂಡಳಿಗೆ ಹಿಂತಿರುಗಿಸದೇ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಬೇಕೆಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಅವರು ಕಾಮೆಡ್-ಕೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಟ್ರೆಂಡ್ ಪ್ರತಿವರ್ಷ ಬದಲಾಗುತ್ತಿರುತ್ತದೆ. ಖಾಸಗಿ ಕಾಲೇಜುಗಳ ಪೈಕಿ ಕೆಲವು ಮೂಲಸೌಕರ್ಯ ಒದಗಿಸದಿರುವುದು ಮತ್ತು ಪ್ಲೇಸ್ವೆುಂಟ್ನಲ್ಲಿ ಹಿಂದುಳಿದಿರುವುದರಿಂದ ವಿದ್ಯಾರ್ಥಿಗಳು ಆಂತಹ ಕಾಲೇಜಿಗೆ ಪ್ರವೇಶ ಪಡೆಯುವುದು ಕಮ್ಮಿಯಾಗಿದೆ.
| ಎಸ್. ಕುಮಾರ್, ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ
ಕಡಿಮೆ ಪ್ರವೇಶಕ್ಕೆ ಪ್ರಮುಖ ಕಾರಣ:
# ಪ್ಲೇಸ್ವೆುಂಟ್ ಕಡಿಮೆ
# ಮೂಲಸೌಕರ್ಯದ ಕೊರತೆ
# ಹೆಚ್ಚಿನ ಪ್ರವೇಶ ಶುಲ್ಕ
# ಹೆಚ್ಚುವರಿ ಶುಲ್ಕ
ಕೃಪೆ:ವಿಜಯವಾಣಿ