ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

ದಕ್ಷಿಣ ಕನ್ನಡ,ಜನವರಿ,18,2025 (www.justkannada.in): ಪತ್ನಿಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ವಿಷ ಸೇವಿಸಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ರಾಮಚಂದ್ರಪ್ಪ (52) ಎಂಬಾತ ತನ್ನ ಪತ್ನಿ ವಿನೋದರನ್ನು(48) ಗುಂಡಿಕ್ಕಿ ಕೊಂದು ಬಳಿಕ ತಾನೂ ಕೂಡ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿ ಪತಿ ರಾಮಚಂದ್ರ ಪತ್ನಿ  ವಿನೋದ ಜೊತೆ ಗಲಾಟೆ ಮಾಡಿದ್ದು  ಈ ವೇಳೆ ಪತ್ನಿಯನ್ನ ಗುಂಡಿಕ್ಕಿ ಕೊಂದ ರಾಮಚಂದ್ರಪ್ಪ ಬಳಿಕ ಭಯದಿಂದ ತಾನೂ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗದೆ ಘಟನಾ ಸ್ಥಳಕ್ಕೆ ಸುಳ್ಯ ಠಾಣಾ ಪೊಲೀಸರು ಭೇಟಿ ನೀಡಿದ್ದು. ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Husband, kill, wife, commits suicide