ದಕ್ಷಿಣ ಕನ್ನಡ,ಜನವರಿ,25,2025 (www.justkannada.in): ಇನ್ ಸ್ಟಾಗ್ರಾಮ್ ನಲ್ಲಿ ಬೇರೆ ಯುವತಿ ಪೋಸ್ಟ್ ಗೆ ಲೈಕ್ ಕೊಟ್ಟಿದ್ದಕ್ಕೆ ಪ್ರೇಯಸಿ ತರಾಟೆ ತೆಗೆದುಕೊಂಡಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಪುಂಜಾಲಕಟ್ಟೆಯ ಕುಕ್ಕುಪಾಡಿಯಲ್ಲಿ ಈ ಘಟನೆ ನಡೆದಿದ್ದು, ಚೇತನ್ ಆತ್ಮಹತ್ಯೆಗೆ ಶರಣಾದ ಯುವಕ. ಚೇತನ್ ಇನ್ ಸ್ಟಾಗ್ರಾಮ್ ನಲ್ಲಿ ಯುವತಿಯೊಬ್ಬರ ಪೋಸ್ಟ್ ಗೆ ಲೈಕ್ ಕೊಟ್ಟಿದ್ದು, ಈ ವೇಳೆ ಚೇತನ್ ಮನೆಗೆ ಬಂದಿದ್ದ ಪ್ರೇಯಸಿ ಚೈತನ್ಯ ತರಾಟೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.
ಇದರಿಂದ ಮನನೊಂದ ಚೇತನ್ ತಮ್ಮ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Key words: Instagram, post, young man, commits suicide