ನವದೆಹಲಿ,ಆಗಸ್ಟ್,8,2022(www.justkannada.in): ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು ಇದೀಗ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಭಾರತ ಚಿನ್ನದ ಪದಕ ಬಾಚಿಕೊಂಡಿದೆ.
ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಸ್ವರ್ಣಪದಕಕ್ಕೆ ಮುತ್ತಿಕ್ಕಿದ್ದಾರೆ. ಇಂಗ್ಲೇಂಡ್ ನ ಲೇನ್, ವೆಂಡಿ ವಿರುದ್ಧ ಜಯಭೇರಿ ಭಾರಿಸಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ 21ನೇ ಚಿನ್ನವನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂದಂತೆ ಆಗಿದೆ.
ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ 19-21, 21-9, 21-16ರಲ್ಲಿ ಮಲೇಷ್ಯಾದ ಎನ್ಜಿ ತ್ಸೆ ಯಾಂಗ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತನ್ನ 20ನೇ ಚಿನ್ನದ ಪದಕವನ್ನು ದಾಖಲಿಸಿತು. ಈ ಮೊದಲು ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ ಸಿಂಧು ಅವರು ಸ್ವರ್ಣ ಪದಕ ಜಯಸಿದ್ದರು.
ಇನ್ನು ಟೇಬಲ್ ಟೆನ್ನಿಸ್ ನಲ್ಲೂ ಭಾರತದ ಶರತ್ ಕಮಲ್ ಬಂಗಾರದ ಪದಕ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಈವರೆಗೆ 22 ಚಿನ್ನ, 15 ಬೆಳ್ಳಿ ಹಾಗೂ 22 ಕಂಚನ್ನ ಗೆದ್ದಿದೆ.
Key words: Common wealth Games 2022-Gold medal -india